ಕೋಳಿ ಅಂಕ: ಆರು ಮಂದಿ ಬಂಧನ

ಬೈಂದೂರು, ಜ.23: ಕೋಳಿ ಅಂಕಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬೈಂದೂರು ಬಂಧಿಸಿರುವ ಘಟನೆ ಕಳವಾಡಿ ಕಂಬಳಗದ್ದೆ ಎಂಬಲ್ಲಿ ಜ.22ರಂದು ಸಂಜೆ ವೇಳೆ ನಡೆದಿದೆ.
ಕಾಲ್ತೋಡು ಗ್ರಾಮದ ಅಣ್ಣಪ್ಪ(44), ನಾರಾಯಣ ಪೂಜಾರಿ(34), ಮುದೂರು ಗ್ರಾಮದ ಕೃಷ್ಣ ಪೂಜಾರಿ(38), ಯಡ್ತರೆ ಗ್ರಾಮದ ಮಂಜುನಾಥ ಪೂಜಾರಿ(39), ಸೂರಕುಂದದ ಪ್ರವೀಣ್ ಶೆಟ್ಟಿ, ಶಿವ ದೇವಾಡಿಗ ಬಂಧಿತ ಆರೋಪಿಗಳು.
ಇವರಿಂದ 1200ರೂ. ಮೌಲ್ಯದ 2 ಕೋಳಿಗಳು, ಎರಡು ಕೋಳಿ ಕತ್ತಿ ಮತ್ತು 600ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





