ರಾಗಧನ ಪಲ್ಲವಿ ಪ್ರಶಸ್ತಿಗೆ ಪ್ರಜ್ಞಾ ಅಡಿಗ ಆಯ್ಕೆ

ಉಡುಪಿ: ಪ್ರಸಿದ್ಧ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ರಾಗಧನ ಸಂಸ್ಥೆ ಮೂಲಕ ನೀಡಲಾಗುವ ‘ರಾಗಧನ ಪಲ್ಲವಿ’ ಪ್ರಸಸ್ತಿಗೆ ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಫೆ.7ರ ಶನಿವಾರ ಸಂಜೆ 5:30ಕ್ಕೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಗಧನ ಸಂಸ್ಥೆ ತಿಳಿಸಿದೆ.
ಪ್ರಶಸ್ತಿಯನ್ನು ಡಾ.ಗಣಪತಿ ಜೋಯಿಸ್ ಪ್ರದಾನ ಮಾಡಲಿರುವರು. ಸಂಸ್ಥೆಯ ಅಧ್ಯಕ್ಷರಾದ ಡಾ.ಕಿರಣ್ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿರುವರು. ನಂತರ ಪ್ರಜ್ಞಾ ಅಡಿಗ ಅವರ ರಾಗಂ.. ತಾನಂ.. ಪಲ್ಲವಿ.. ಗಾಯನ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





