ಕೊಲ್ಲೂರು ಮೂಕಾಂಬಿಕಾ ದೇವಾಲಯ ಪ್ರಾಧಿಕಾರ ರಚನೆಯನ್ನು ಸ್ವಾಗತಿಸಿದ ಬಾಬು ಶೆಟ್ಟಿ ಕೊಲ್ಲೂರು

ಉಡುಪಿ, ಮಾ.6: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದಿನ ಬಜೆಟ್ ಮಂಡನೆ ವೇಳೆ ಪ್ರಕಟಿಸಿದ ಕೊಲ್ಲೂರು ಮೂಕಾಂಬಿಕಾ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚನೆಯ ಘೋಷಣೆಯನ್ನು ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷ ಬಾಬುಇ ಶೆಟ್ಟಿ ತೆಗ್ಗರ್ಸೆ ಸ್ವಾಗತಿಸಿದ್ದಾರೆ.
ಇದೊಂದು ತುಂಬಾ ಒಳ್ಳೆಯ ನಿರ್ಧಾರವಾಗಿದ್ದು, ಇದರಿಂದ ರಾಜ್ಯದ ಅಗ್ರಗಣ್ಯ ತೀರ್ಥಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಭಿವೃದ್ಧಿಗೆ ಅವಕಾಶವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದುವರೆಗೆ ದೇವಾಲಯದಲ್ಲಿ ಸಂಗ್ರಹವಾದ ಹಣದಿಂದಲೇ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿತ್ತು. ಪ್ರಾಧಿಕಾರ ರಚನೆಯ ಸರಕಾರದ ನಿರ್ಧಾರದಿಂದ ಇನ್ನು ಮುಂದೆ ಸರಕಾರವೂ ಕೊಲ್ಲೂರಿನ ಅಭಿವೃದ್ಧಿಗೆ ಕೈಜೋಡಿಸಲಿದೆ ಎಂದರು.
ಸಾರ್ವಜನಿಕರ ಹಿತದೃಷ್ಟಿ, ಭಕ್ತಾದಿಗಳು ಹಾಗೂ ದೇವಸ್ಥಾನದ ಹಿತದೃಷ್ಟಿಯಿಂದ ಸರಕಾರ ಪ್ರಾಧಿಕಾರ ರಚನೆಯ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಬಾಬು ಶೆಟ್ಟಿ ಹೇಳಿದರು.
Next Story





