ಕೋಡಿ ಬ್ಯಾರೀಸ್‌ನಲ್ಲಿ ನೂತನ ಬಿಎಡ್ ಪ್ರಶಿಕ್ಷಣಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮ

ಕುಂದಾಪುರ, ಮಾ.6: ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ 2025-26ರ ಬಿ.ಎಡ್ ಪ್ರಶಿಕ್ಷಣಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮ ವನ್ನು ಇತ್ತೀಚೆಗೆ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ತ ಮಂಡಳಿಯ ಸದಸ್ಯ ಡಾ.ಆಸೀಫ್ ಬ್ಯಾರಿ ಮಾತನಾಡಿ, ಶಿಕ್ಷಣವು ಜೀವನವನ್ನು ನಿರ್ಧರಿಸುತ್ತದೆ ಮತ್ತು ಮುಂದಿನ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ. ಶಿಕ್ಷಕರಾಗುವ ನೀವು ಸಮಾಜಕ್ಕೆ ಮಾದರಿಯಾಗಿರಬೇಕು. ಅಲ್ಲದೆ ಸಮಾಜಕ್ಕಾಗಿ ಮೌಲ್ಯಭರಿತ ಆದರ್ಶ ವಿದ್ಯಾರ್ಥಿ ಗಳನ್ನು ರೂಪಿಸುವ ಶ್ರೇಷ್ಠ ಶಿಕ್ಷಕರಾಗಬೇಕು ಎಂದು ತಿಳಿಸಿದರು.
ಬ್ಯಾರೀಸ್ ಸಮೂಹ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಶೆಟ್ಟಿ ಮಾತನಾಡಿ, ಕನಸುಗಳನ್ನು ಪೂರೈಸಲು ನಿಮ್ಮನ್ನು ನೀವು ಮೊದಲು ಸಿದ್ಧಪಡಿಸಿಕೊಳ್ಳಬೇಕು. ನೀವು ವಿದ್ಯಾರ್ಥಿಗಳಿಗೆ ಪ್ರೀತಿಯ ಗುರುಗಳಾಗುವ ಪ್ರಯತ್ನವನ್ನು ಮಾಡ ಬೇಕು. ಪ್ರತಿದಿನ ಹೊಸ ಹೊಸ ಕನಸುಗಳನ್ನು ಗುರಿಗಳನ್ನು ಹೊಂದಿಕೊಂಡು ಈ ಸಂಸ್ಥೆಗೆ ಬರಬೇಕು. ಸಮಾಜ ವನ್ನು ಉತ್ತಮವಾಗಿ ರೂಪಿಸುವ ಕಡೆಗೆ ಚಿಂತಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ನೀವು ಶಿಕ್ಷಕರಾಗಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕು. ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡುವ ಜವಾಬ್ದಾರಿಯನ್ನು ಶಿಕ್ಷಕರು ಹೊಂದಿದ್ದಾರೆ ಎಂದು ತಿಳಿಸಿದರು.
ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಫಿರ್ದೋಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲ ಪ್ರವೀಣ್ ಕುಮಾರ್ ಕೆ.ಪಿ. ಕಾಲೇಜಿನ ಶಿಸ್ತು ರೀತಿ-ನೀತಿಗಳ ಕುರಿತು ತಿಳಿಸಿದರು. ಪ್ರಾಧ್ಯಾಪಕ ಡಾ.ವೆಂಕಟೇಶ್ ಎಸ್. ಸ್ವಾಗತಿಸಿದರು. ಶಂಶಾದ್ ವಂದಿಸಿದರು. ಅನಂತ ಭಟ್ ಕಾರ್ಯಕ್ರಮ ನಿರೂಪಿಸಿದರು







