ಬೆಂಕಿ ಅಕಸ್ಮಿಕ: ಗಾಯಾಳು ಮಹಿಳೆ ಮೃತ್ಯು

ಮಣಿಪಾಲ, ಮಾ.8: ಕ್ಯಾಂಡಲ್ ಬೆಂಕಿ ತಗುಲಿದ ಪರಿಣಾಮ ಗಂಭೀರ ವಾಗಿ ಗಾಯಗೊಂಡ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಅಲೆವೂರು ಗ್ರಾಮದ ಪ್ರಗತಿ ನಗರ ನಿವಾಸಿ ಭಾಗ್ಯ(40) ಎಂದು ಗುರುತಿಸಲಾಗಿದೆ. ಇವರು ಜ.23ರಂದು ಮನೆಯಲ್ಲಿ ಕರೆಂಟ್ ಇಲ್ಲದ ಕಾರಣ ಕ್ಯಾಂಡಲ್ ಹಚ್ಚಿಕೊಂಡು ಪಕ್ಕದಲ್ಲಿ ಇಟ್ಟು ಮಲಗಿದ್ದರು. ತಡರಾತ್ರಿ ಕ್ಯಾಂಡಲ್‌ನಿಂದ ಬೆಂಕಿ ಅಕಸ್ಮಿಕವಾಗಿ ಭಾಗ್ಯ ಅವರಿಗೆ ತಾಗಿ ಹೊತ್ತಿ ಕೊಂಡಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಚಿಕಿತ್ಸೆ ಫಲಕಾರಿ ಯಾಗದೆ ಮಾ.6ರಂದು ರಾತ್ರಿ ವೇಳೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





