ಕೆರೆಗೆ ಬಿದ್ದು ಮಹಿಳೆ ಮೃತ್ಯು

ಗಂಗೊಳ್ಳಿ, ಮಾ.8: ಮಹಿಳೆಯೊಬ್ಬರು ಆಯತಪ್ಪಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಮಾ.7ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ತ್ರಾಸಿ ಗ್ರಾಮದ ಶೆಟ್ರಹಿತ್ಲು ನಿವಾಸಿ ಸೀತಾ ಮೊಗವೀರ(67) ಎಂದು ಗುರುತಿಸಲಾಗಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಇವರು, ದೇವರ ಪೂಜೆ ಹಾಗೂ ಮಧ್ಯಾಹ್ನದ ಊಟಕ್ಕೆ ಬಾಳೆ ಎಲೆ ತರಲು ಮನೆ ಸಮೀಪದ ಅಡಕೆ ತೋಟಕ್ಕೆ ಹೋಗಿದ್ದರು.
ಈ ವೇಳೆ ಅವರು ತೋಟದಲ್ಲಿರುವ ಸಣ್ಣ ಕೆರೆಗೆ ಆಯತಪ್ಪಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





