ವಿಶ್ವ ಮಹಿಳಾ ದಿನಾಚರಣೆ: ಸಾಧಕರಿಗೆ ಸನ್ಮಾನ

ಉಡುಪಿ, ಮಾ.9: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉಡುಪಿ ಹಾಗೂ ಬ್ರಹ್ಮಾವರದ ಇಬ್ಬರು ಮಹಿಳೆಯರನ್ನು ಇಂದು ಸನ್ಮಾನಿಸಲಾಯಿತು.
ಅಂಧತ್ವ ಇದ್ದರೂ ಈವರೆಗೆ 12 ಪುಸ್ತಕಗಳನ್ನು ಬರೆದಿರುವ ಉಡುಪಿ ಕಲ್ಸಂಕದ ಸೌಮ್ಯ ಪುತ್ರನ್ ಹಾಗೂ ಬ್ರಹ್ಮಾವರ ಬಾರ್ಕೂರು ಪರಿಸರದ ಶ್ರೀ ಮಾಸ್ತಿ ದುರ್ಗಾ ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾಗಿರುವ ವಿಶಾಲಾ ಮಹೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮದ್, ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಜಿಲ್ಲಾ ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಿಲ್ಲಾ ಸಲಹೆಗಾರರಾದ ಸವಿತಾ, ಜಿಲ್ಲಾ ಉಪಾಧ್ಯಕ್ಷ ಅಫೋನ್ಸೊ ಮೆನೆಜಸ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
Next Story





