ಅಸ್ಸೋಚಾಮ್ ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕಿಶೋರ್ ಅಳ್ವ ನೇಮಕ

ಉಡುಪಿ, ಮಾ.21: ದಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ ಸಂಸ್ಥೆಯು 2026-27ನೇ ಸಾಲಿಗೆ ತನ್ನ ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಿಶೋರ್ ಅಳ್ವ ಅವರನ್ನು ನೇಮಕ ಮಾಡಿದೆ.
ಕಿಶೋರ್ ಅಳ್ವ ಅವರು ಬಹುರಾಷ್ಟ್ರೀಯ ಕಂಪನಿಗಳು, ಇಂಧನ, ಮೂಲಸೌಕರ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂರು ದಶಕಗಳಿಗಿಂತ ಹೆಚ್ಚು ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಜಾಗತಿಕ ಖ್ಯಾತಿಯ ಸಂಸ್ಥೆಗಳಲ್ಲಿ ಪ್ರಮುಖ ನಾಯಕತ್ವ ಮತ್ತು ತಂತ್ರಾತ್ಮಕ ಹುದ್ದೆಗಳನ್ನು ವಹಿಸಿಕೊಂಡಿದ್ದು, ವ್ಯವಹಾರ ಅಭಿವೃದ್ಧಿ, ನೀತಿ ವಕಾಲತ್ತು ಮತ್ತು ಸಂಸ್ಥಾಪನಾ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಇವರು 2018-19ರಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಕರ್ನಾಟಕದಲ್ಲಿ ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿ ದ್ದಾರೆ. 1920ರಲ್ಲಿ ಸ್ಥಾಪಿತವಾದ ಅಸ್ಸೋಚಾಮ್ 4.5 ಲಕ್ಷಕ್ಕೂ ಹೆಚ್ಚು ಕಂಪನಿಗಳನ್ನು ಒಳಗೊಂಡ ಬಲಿಷ್ಠ ಸದಸ್ಯತ್ವ ದೊಂದಿಗೆ ಭಾರತ ದೇಶದ ಪ್ರಮುಖ ಶೃಂಗ ಮಟ್ಟದ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ.





