ನಿಟ್ಟೆ ತಾಂತ್ರಿಕ ಕಾಲೇಜು ತಂಡಕ್ಕೆ ‘ಯಕ್ಷಯಾನ’ ಸಮಗ್ರ ಪ್ರಶಸ್ತಿ

ಕಾರ್ಕಳ, ಮಾ.23: ಸುರತ್ಕಲ್‌ನ ಗೋವಿಂದದಾಸ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ‘ಯಕ್ಷಯಾನ-2026’ ಯಕ್ಷಗಾನ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ’ಕಲಾಸಂಗಮ’ ಯಕ್ಷಗಾನ ತಂಡವು ಭಾಗವಹಿಸಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಅದೇ ರೀತಿ ಮಂಗಳೂರಿನ ಎಜೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಇತ್ತೀಚೆಗೆ ಆಯೋಜಿಸಿದ ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆ ’ಯಕ್ಷಕಲೋತ್ಸವ’ದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯದ ಕಲಾಸಂಗಮ ಯಕ್ಷಗಾನ ತಂಡವು ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಕಳೆದ ಬಾರಿಯೂ ಚಾಂಪಿಯನ್ ಆಗಿದ್ದ ನಿಟ್ಟೆ ಕಾಲೇಜು ತಂಡ ಈ ಬಾರಿಯ ಸಾಧನೆಯೊಂದಿಗೆ, ಸತತ ಮೂರು ಬಾರಿ ಗೆದ್ದು ಪ್ರಶಸ್ತಿಯ ಹ್ಯಾಟ್ರಿಕ್ ಪೂರ್ಣಗೊಳಿಸಿತು.
Next Story







