ಅಂದರ್ ಬಾಹರ್ ಪ್ರಕರಣ : ನಾಲ್ವರ ಬಂಧನ

ಶಂಕರನಾರಾಯಣ, ಮಾ.24: ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿ ಮಾ.23ರಂದು ರಾತ್ರಿ ವೇಳೆ ಅಂದರ್-ಬಾಹರ್ ಇಸ್ಟೀಟ್ ಜುಗಾರಿ ಆಡುತಿದ್ದ ನಾಲ್ಕು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಸಿದ್ದಾಪುರ ಗ್ರಾಮದ ಮೇಲ್ಜೆಡ್ಡು ನಿವಾಸಿ ಸುಧಾಕರ ಶೆಟ್ಟಿ(52), ವಾರಾಹಿ ರಸ್ತೆಯ ರಮೇಶ್(46), ಜನ್ಸಾಲೆಯ ಮನೋಹರ (46), ಕುಂದಾಪುರದ ಮಹೇಶ್(43) ಬಂಧಿತ ಆರೋಪಿಗಳು. ಹರ್ಷ, ಕೃಷ್ಣ ಪೂಜಾರಿ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ 6,700ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





