ಮಕ್ಕಳಾಗದ ಚಿಂತೆಯಲ್ಲಿ ವ್ಯಕ್ತಿ ಆತ್ಮಹತ್ಯೆ

ಗಂಗೊಳ್ಳಿ, ಮಾ.28: ಮದುವೆಯಾಗಿ 6 ವರ್ಷ ಕಳೆದರೂ ಮಕ್ಕಳಾಗದೇ ಚಿಂತೆಯಿಂದ ಜೀವನದಲ್ಲಿ ಜುಗುಪ್ಸೆ ಗೊಂಡ ಹಕ್ಲಾಡಿಯ ಶ್ರೀಧರ್ ಚಂದನ್ ಎಂಬವರ ಮಗ ರವೀಂದ್ರ(41) ಎಂಬವರು ಕುಂದಬಾರಂದಾಡಿ ಗ್ರಾಮದ ತೊರೊಳ್ಳಿಯ ಚಕ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರಿನ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಮಾ.25ರ ಬೆಳಗ್ಗೆಯಿಂದ ಮನೆಯಿಂದ ಬೈಕಿನಲ್ಲಿ ಹೋದವರು ನಾಪತ್ತೆ ಯಾಗಿದ್ದರು. ಮಾ.27ರ ಮಧ್ಯಾಹ್ನ ವೇಳೆ ಇವರ ಮೃತದೇಹ ತೊರೊಳ್ಳಿಯ ಚಕ್ರ ನದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





