ದಾಹ ತಣಿಸಲೆಂದು ಸ್ಥಾಪಿಸಿರುವ ಅರವಟ್ಟಿಗೆ ಉದ್ಘಾಟನೆ

ಉಡುಪಿ, ಎ.3: ನಗರದಲ್ಲಿ ಸುಡು ಬಿಸಿಲಿನ ತಾಪಮಾನವು ಹೆಚ್ಚಿದ್ದು, ಸಾರ್ವಜನಿಕರ ದೇಹ ದಾಹ ತಣಿಸಲು ಉಡುಪಿ ಜಿಲ್ಲಾ ನಾಗರೀಕ ಸಮಿತಿಯು, ಜೋಸ್ ಆಲುಕ್ಕಾಸ್ ಆಭರಣಮಳಿಗೆಯ ಸಹಕಾರದಿಂದ, ನಗರದ ಮಾರುಥಿ ವೀಥಿಕಾದಲ್ಲಿ ವ್ಯವಸ್ಥೆಗೊಳಿಸಿರುವ ಅರವಟ್ಟಿಗೆ ಉದ್ಘಾಟನೆ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಸವರಾಜ ಹುಬ್ಬಳ್ಳಿ, ಸಮಾಜ ಸೇವಕ ನರಸಿಂಹ ಭಟ್ ಮಣಿಪಾಲ, ಜೋಸ್ ಅಲುಕ್ಕಾಸ್ ಮಳಿಗೆಯ ಮೆನೇಜರ್ ರಾಜೇಶ್ ಎನ್.ಆರ್. ಮತ್ತು ಗೋಪಾಲ್, ಉದ್ಯಮಿ ಉದಯ ಕುಮಾರ್, ಕೊಟೆಕ್ ಮಹೀಂದ್ರ ಬ್ಯಾಂಕಿನ ರಾಹುಲ್, ವಿಷ್ಣು, ಮತ್ತು ಸಿಬಂದಿಗಳು ಉಪಸ್ಥಿತರಿದ್ದರು.
ಹನುಮಾನ್ ಜಯಂತಿಯ ಪ್ರಯುಕ್ತವಾಗಿ ಪಾನಕ ಸೇವೆಯನ್ನು ಸುದರ್ಶನ್ ನಾಯಕ್ ನೀಡಿದರು. ಅರವಟ್ಟಿಗೆಯಲ್ಲಿ ನಿತ್ಯವು ಮೃತ್ತಿಕೆಯ ಹೂಜಿಯಲ್ಲಿ ಸಂಗ್ರಹಿಸಿಟ್ಟಿರುವ ಪರಿಶುದ್ಧ ತಂಪು ನೀರು, ಹಾಗೂ ಹಣ್ಣು ಹಂಪಲುಗಳ ಪಾನೀಯ ಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಈ ಯೋಜನೆ ಮಳೆಗಾಲ ಆರಂಭದವರೆಗೆ ಮುಂದು ವರಿಯಲಿದೆ ಎಂದು ಅರವಟ್ಟಿಗೆ ಸ್ಥಾಪಕ, ಸಮಾಜಸೇವಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.





