ಡಾ.ಹರೇಕಳ ಹಾಜಬ್ಬರಿಗೆ ರಜತ ಸಂಭ್ರಮ ಪುರಸ್ಕಾರ ಪ್ರದಾನ

ಕೋಟ, ಎ.3: ಮಣೂರು ಮಹಾಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಗೀತಾನಂದ ವೇದಿಕೆಯಲ್ಲಿ ಮಣೂರು ಫ್ರೆಂಡ್ಸ್ ಮಣೂರು ಇದರ ರಜತ ಸಂಭ್ರಮ ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಕ್ಷರ ಸಂತ ಡಾ.ಹರೇಕಳ ಹಾಜಬ್ಬ ಇವರಿಗೆ ರಜತ ಸಂಭ್ರಮ ಪುರಸ್ಕಾರ ಪ್ರದಾನ ಮಾಡಲಾ ಯಿತು ಸ್ಥಳೀಯರಾದ ರವೀಂದ್ರ ಪೈ ಇವರಿಗೆ ಸಾಧಕ ಪುರಸ್ಕಾರ, ನಿಧಿ ಪೈಗೆ ಪ್ರತಿಭಾ ಪುರಸ್ಕಾರ, ಸ್ಥಳೀಯ ಸಾಧಕರಾದ ಕಂಬಳ ಕ್ಷೇತ್ರದ ರಘುರಾಮ ಶೆಟ್ಟಿ, ಶಿವರಾಮ ಶೆಟ್ಟಿ ನಡುಬೆಟ್ಟು, ಮೆಸ್ಕಾಂ ಉಮ್ಮರ್ ಸಾಹೇಬ್, ನಿರ್ಮಲ ಟೀಚರ್ ಅವರಿಗೆ ಶೇಷ ಅಭಿನಂದನೆ, ಕೋಟದ ಪಂಚವರ್ಣ ಸಂಘಟನೆಗೆ ಸಂಘಟನಾ ಪುರಸ್ಕಾರ, ಮಣೂರು ಫ್ರೆಂಡ್ಸ್ ಹುಟ್ಟಿಗೆ ಕಾರಣಿಭೂತರಾದ ಗೌರವಾಧ್ಯಕ್ಷ ಸುರೇಶ್ ಆಚಾರ್ ಇವರಿಗೆ ಹುಟ್ಟೂರ ಸನ್ಮಾನ ನೀಡಿ ಗೌರಸಲಾಯಿತು.
ಅಶಕ್ತ ಹಾಗೂ ಅನಾರೋಗ್ಯ ಪೀಡಿತರಿಗೆ ನೆರವು, ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ನೆರವನ್ನು ಹಸ್ತಾಂತರಿ ಸಲಾಯಿತು. ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ದೇಗುಲದ ಪರವಾಗಿ ಸಂಘಟಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಅಧ್ಯಕ್ಷತೆಯನ್ನು ಮಣೂರು ಫ್ರೆಂಡ್ಸ್‌ನ ಗೌರವ ಸಲಹೆಗಾರ ಸುಬ್ರಾಯ ಆಚಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಗಣೇಶ್ ಸೀಲ್ಕ್ಸ್ ಅನಂತ್ ನಾಯಕ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ರಾಘವೇಂದ್ರ ಆಚಾರ್, ಉದ್ಯಮಿ ನವೀನ್ ಶೆಟ್ಟಿ ಪಟೇಲರ ಮನೆ, ಸಂತೋಷ್ ಸುವರ್ಣ ಉಪಸ್ಥಿತರಿದ್ದರು.
ಮಣೂರು ಫ್ರೆಂಡ್ಸ್ ಸ್ಥಾಪಕ ಸದಸ್ಯರಾದ ಪ್ರಭಾಕರ್ ಆಚಾರ್ ಸ್ವಾಗತಿಸಿದರು. ಪ್ರಣುತ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿದರು. ಸುಧಾಕರ ಆಚಾರ್, ದಿನೇಶ್ ಆಚಾರ್ ಮತ್ತಿತರರು ಸಹಕರಿಸಿದರು.







