ಹಿರಿಯ ಪತ್ರಕರ್ತ ಚೆಲುವರಾಜ ಪೆರಂಪಳ್ಳಿ ನಿಧನ

ಉಡುಪಿ, ಎ.5: ಹಿರಿಯ ಪತ್ರಕರ್ತ ಚೆಲುವರಾಜ ಪೆರಂಪಳ್ಳಿ(69) ಸ್ವಗೃಹದಲ್ಲಿ ಅಸೌಖ್ಯದಿಂದ ಎ.5ರಂದು ನಿಧನರಾದರು.
ಪೆರಂಪಳ್ಳಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ, ಯುವಕ ಮಂಡಲದ ಗೌರವಾಧ್ಯಕ್ಷ, ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರದ ಟ್ರಸ್ಟಿಯಾಗಿದ್ದ ಇವರು, ತರಂಗ ವಾರಪತ್ರಿಕೆಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.
ನಾಟಕ ರಚನೆಕಾರರು, ಸಾಹಿತಿ ಹಾಗೂ ಊರಿನ ಎಲ್ಲ ದೇವಸ್ಥಾನ ಮತ್ತು ದೈವಸ್ಥಾನಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಆದಿಉಡುಪಿಯ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬೈದಶ್ರೀಯ ಉಪಾಧ್ಯಕ್ಷ ಮತ್ತು ವಕ್ತಾರರಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
Next Story





