ಹಿರಿಯ ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ ನಿಧನ

ಉಡುಪಿ, ಎ.7: ಪರ್ಕಳ ಶೆಟ್ಟಿಬೆಟ್ಟು ವಾರ್ಡಿನ ನಿವಾಸಿ ಹಿರಿಯ ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ(75) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಎ.7ರಂದು ನಿಧನರಾದರು.
ಮೃತರು ಪತ್ನಿ, ಹಾಗೂ ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ವ್ಯವ ಹಾರ ನಡೆಸುತ್ತಿದ್ದ ಅವರು ಕೃಷಿಕರಾಗಿದ್ದರು. ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಮಲ್ಪೆ ಮನೋರ ಮಧ್ವರಾಜ್ ಸ್ಪರ್ಧಿಸಿದ ಚುನಾವಣೆಯಲ್ಲಿ ಹೆಗಲುಕೊಟ್ಟು. ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ನಿಧನಕ್ಕೆ ಉಡುಪಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಹರೀಶ್ ಕಿಣಿ ಮತ್ತು ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಹಾಗೂ ಪರ್ಕಳ ಕಾಂಗ್ರೆಸ್ ಸಂತಾಪ ಸೂಚಿಸಿದ್ದಾರೆ.
Next Story





