ಪಿಯುಸಿ ಫಲಿತಾಂಶ: ಕಾರ್ಕಳದ ಚೈತ್ರಿಕಾ- ವೈಷ್ಣವಿಗೆ ನಾಲ್ಕನೇ ರ್ಯಾಂಕ್

ಕಾರ್ಕಳ ಜ್ಞಾನಸುಧಾ ಕಾಲೇಜಿನ ಚೈತ್ರಿಕಾ ಚೌದರಿ ಹಾಗೂ ವೈಷ್ಣವಿ ಕುಲಕರ್ಣಿ ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಚಿತ್ರದುರ್ಗದ ಕೃಷಿಕ ಲೋಕೇಶ್ ಹಾಗೂ ನಾಗರತ್ನ ದಂಪತಿ ಪುತ್ರಿಯಾಗಿರುವ ಚೈತ್ರಿಕಾ, ಹಾಸ್ಟೆಲ್‌ನಲ್ಲಿದ್ದುಕೊಂಡು ಶಿಸ್ತುಬದ್ಧ ಅಧ್ಯಯನದ ಮೂಲಕ ಈ ಸಾಧನೆ ಮಾಡಿದ್ದು, ಮುಂದೆ ವೈದ್ಯೆಯಾಗಿ ಸಮಾಜ ಸೇವೆ ಮಾಡುವ ಗುರಿ ಹೊಂದಿದ್ದಾರೆ.
ಮಂಗಳೂರಿನ ನೀರಾವರಿ ಇಲಾಖೆಯ ಅಧಿಕಾರಿ ಪಿ. ಕುಲಕರ್ಣಿ ಹಾಗೂ ಬ್ಯಾಂಕ್ ಉದ್ಯೋಗಿ ಲತಾ ದಂಪತಿ ಪುತ್ರಿಯಾಗಿರುವ ವೈಷ್ಣವಿ, ಮುಂದೆ ಇಂಜಿನಿಯರ್ ಆಗುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.
Next Story





