ಸುಮಾ ಜಿ.ಆರ್.ಗೆ ಪಿಎಚ್‌ಡಿ ಪದವಿ

ಉಡುಪಿ, ಎ.12: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸಂಶೋಧನಾ ವಿದ್ಯಾರ್ಥಿನಿ ಸುಮಾ ಜಿ.ಆರ್. ಮಂಡಿಸಿದ ಸಿಂಥೆಸಿಸ್ ಅಂಡ್ ಕ್ಯಾರೆಕ್ಟರೈಸೇಶನ್ ಆಫ್ ಪಿರಿಡೀನ್ ಡೆರಿವೇಟಿವ್ಸ್ ಅಂಡ್ ದೇರ್ ಹೈಡ್ರೋಜನ್ ಬಾಂಡಿಂಗ್ ಕಾಂಪ್ಲೆಕ್ಸಸ್: ಇನ್ವೆಸ್ಟಿಗೇಶನ್ಸ್ ಆನ್ ಮೆಸೊಮಾರ್ಫಿಸಂ ಅಂಡ್ ಆಂಟಿಮೈಕ್ರೋಬಿಯಲ್ ಆಕ್ಟಿವಿಟೀಸ್ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ ಪಿಎಚ್‌ಡಿ ಪದವಿಯನ್ನು ನೀಡಿದೆ.
ಇವರು ಈ ಸಂಶೋಧನೆಯನ್ನು ಎಂಐಟಿಯ ಬೇಸಿಕ್ ಸೈನ್ಸಸ್ ವಿಭಾಗದ ಅಡಿಷನಲ್ ಪ್ರೊಫೆಸರ್ ಡಾ.ಮದ್ದಸಾನಿ ಶ್ರೀನಿವಾಸುಲು ಅವರ ಮಾರ್ಗ ದರ್ಶನ ಹಾಗೂ ಸಿವಿಲ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ನರೇಶ್ ಕುಮಾರ್ ಮಣಿ ಅವರ ಸಹ-ಮಾರ್ಗದರ್ಶನದಲ್ಲಿ ಮಾಡಿದ್ದಾರೆ. ಇವರು ಕುಂದಾಪುರದ ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸುಮಾರು 19 ವರ್ಷಗಳ ಕಾಲ ಅನ್ವಯಿಕ ಜೀವವಿಜ್ಞಾನ ಹಾಗೂ ಸಹಾಯಕ ಪ್ರಾಧ್ಯಾಪಕಿ ಹಾಗು ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
Next Story





