ಕ್ರಿಶ್ಚಿಯನ್ ಫೋರಂನಿಂದ ಬಿಷಪ್ ಲೆಸ್ಲಿ ಡಿಸೋಜಾರಿಗೆ ಅಭಿನಂದನೆ

ಉಡುಪಿ, ಎ.30: ಯುನೈಟೆಡ್ ಕ್ರಿಶ್ಚಿಯನ್ ಫೋರಂ ಉಡುಪಿ ಜಿಲ್ಲೆ ವತಿಯಿಂದ ಇತ್ತೀಚೆಗೆ ನೂತನವಾಗಿ ಅಧಿಕಾರ ಸ್ವೀಕರಿಸಿದ ಉಡುಪಿ ಕಥೊಲಿಕ್ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
ಈ ಭೇಟಿಯ ವೇಳೆ ವಿವಿಧ ಸಭೆಗಳ ಸಭಾಪಾಲಕರು ಮತ್ತು ಧರ್ಮಾಧ್ಯಕ್ಷರು ಪರಸ್ಪರ ಕ್ರೈಸ್ತ ಐಕ್ಯತೆಯ ಕುರಿತು ಚರ್ಚೆಗಳನ್ನು ನಡೆಸಿದರು. ನೂತನ ಧರ್ಮಾಧ್ಯಕ್ಷರು ಜಿಲ್ಲೆಯಲ್ಲಿ ಕೈಸ್ತ ಐಕ್ಯತೆಗೆ ಹೆಚ್ಚಿನ ಒತ್ತು ನೀಡುವು ದರೊಂದಿಗೆ ತನ್ನ ಸಂಪೂರ್ಣವಾದ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ, ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ, ಸಿಎಸ್‌ಐ ಸದರ್ನ್ ಡಯಾಸಿಸ್ ಕೋಶಾಧಿಕಾರಿ ವಂ. ಐವನ್ ಸೋನ್ಸ್, ವಲಯ ಸಭಾಪಾಲಕ ವಂ.ಕಿಶೋರ್ ಕುಮಾರ್, ಯುಬಿಎಂ ಚರ್ಚ್ ಮಣಿಪಾಲ ಸಭಾಪಾಲಕ ವಂ. ಸಂತೋಷ್, ಸಿಎಸ್‌ಐ ಮಣಿಪುರ ಚರ್ಚಿನ ವಂ. ಪ್ರವೀಣ್ ಮಾಬೆನ್, ಯುಬಿಎಂಸಿ ಕಾರ್ಯದರ್ಶಿ ಕ್ರಿಸ್ಟೋಫರ್, ಫುಲ್ ಗೊಸ್ಪಲ್ ಸಭೆಯ ಪಾಸ್ಟರ್ ಕೆ ವಿ ಪಾವ್ಲ್, ಅಶೋಕ್, ಸಿರೋ ಮಲಂಕರ ಬೈಂದೂರಿನ ವಂ. ಡೇವಿಡ್, ವಂ. ಫಿಲಿಪ್, ಉಡುಪಿ ಧರ್ಮಪ್ರಾಂತದ ಕ್ರೈಸ್ತ ಐಕ್ಯತಾ ಆಯೋಗದ ನಿರ್ದೇಶಕರಾದ ವಂ.ಲಿಯೋ ಪ್ರವೀಣ್ ಹಾಗೂ ವಿವಿಧ ಸಭೆಗಳ ಮುಖಂಡರು ಉಪಸ್ಥಿತರಿದ್ದರು.






