ಹಿರಿಯಡ್ಕ ವೀರಭದ್ರ ದೇವಸ್ಥಾನ ರಥೋತ್ಸವ: ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಿ ವ್ಯವಸ್ಥೆ

ಉಡುಪಿ, ಎ.30: ಹಿರಿಯಡ್ಕದ ಇತಿಹಾಸ ಪ್ರಸಿದ್ಧ ಶ್ರೀವೀರಭದ್ರ ದೇವಸ್ಥಾನದಲ್ಲಿ ನಡೆಯಲಿರುವ ರಥೋತ್ಸವದ ಪ್ರಯುಕ್ತ ಮೇ 4ರಂದು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಿರಿಯಡ್ಕ - ಕಾರ್ಕಳ ರಾಜ್ಯ ಹೆದ್ದಾರಿ ಯಲ್ಲಿ ಹಿರಿಯಡ್ಕ ಜಂಕ್ಷನ್‌ನಿಂದ ಕೋಟ್ನಕಟ್ಟೆ ಜಂಕ್ಷನ್ ವರೆಗೆ ಮೋಟಾರು ವಾಹನ ಕಾಯ್ದೆಯಡಿ ಮೇಲ್ಕಂಡ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ, ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ.
ಪರ್ಯಾಯ ಮಾರ್ಗದ ವಿವರ: ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಹೋಗುವ ಹಾಗೂ ಹರಿಖಂಡಿಗೆ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಮುತ್ತೂರು ಕ್ರಾಸ್- ಮುತ್ತೂರು- ಪಡ್ಡಂ- ಕಾಜರಗುತ್ತು- ಓಂತಿಬೆಟ್ಟು ಮಾರ್ಗವಾಗಿ ಉಡುಪಿ ಕಡೆಗೆ ಸಂಚರಿಸಬೇಕು.
ಉಡುಪಿ ಕಡೆಯಿಂದ ಬೈಲೂರು ಕಾರ್ಕಳ ಕಡೆಗೆ ಹೋಗುವ ವಾಹನಗಳು ಪ್ರಭು ರೋಸ್ ಕಿಚನ್ ಡೈವರ್ಷನ್ ಬಳಿ ಮಾರ್ಗ ಬದಲಿಸಿ ಪಡ್ಡಂ- ಮುತ್ತೂರು- ಮುತ್ತೂರು ಕ್ರಾಸ್ ಮಾರ್ಗವಾಗಿ ಕಾರ್ಕಳ ಬೈಲೂರು- ಹರಿಖಂಡಿಗೆ ಕಡೆಗೆ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.






