ವೃದ್ಧ ನಾಪತ್ತೆ

ಉಡುಪಿ, ಎ.30: ಮರೆವು ಕಾಯಿಲೆಯಿಂದ ಬಳಲುತ್ತಿರುವ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಕುಂಬಾರಕೊಪ್ಪ ಗುಬ್ಬಾಗದ್ದೆ ನಿವಾಸಿ ವೆಂಕಟೇಶ್ ರಾವ್ (78) ಎಂಬ ವೃದ್ಧರು ಕಾರ್ಯಕ್ರಮದ ನಿಮಿತ್ತ ಮಗಳ ಮನೆಯಾದ ಕುಂದಾಪುರದ ಹಳ್ಳಿಹೊಳೆಗೆ ಬಂದಿದ್ದು, ಎ.23ರಂದು ಅಪರಾಹ್ನ 2:30ರ ಸುಮಾರಿಗೆ ಸಮಾರಂಭದ ಊಟ ಮುಗಿಸಿ, ಮನೆಯ ಬಳಿ ಸುತ್ತಾಡಿಕೊಂಡು ಬರುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 5 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣೆಯ ಪಿ.ಎಸ್ ಮೊ.ನಂ: 08259-280299, 08254- 230338, ಎಸ್.ಡಿ.ಪಿ.ಓ ದೂ.ಸಂಖ್ಯೆ: 08254-232338, ಡಿ.ಪಿ.ಓ ದೂ.ಸಂಖ್ಯೆ: 0820-2534777 ಹಾಗೂ ರೇಂಜ್ ಮೊ.ನಂ: 8242220501 ಅನ್ನು ಸಂಪರ್ಕಿಸಬಹುದು ಎಂದು ಶಂಕರನಾರಾಯಣ ಪೊಲೀಸ್ ಠಾಣೆಯ ಉಪ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.
Next Story




