ಸುರೇಖಾಗೆ ಪಿಎಚ್‌ಡಿ ಪದವಿ

ಉಡುಪಿ, ಮೇ 2: ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಚಾರ್ಯ ಸುರೇಖಾ ಕೆ. ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ‘ಎ ಕ್ರಿಟಿಕಲ್ ಸ್ಟಡಿ ಆನ್ ದ ಎನ್ಫೋರ್ಸ್ಮೆಂಟ್ ಆಫ್ ದ ಡಿಸಿಷನ್ಸ್ ಆಫ್ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿಯನ್ನು ನೀಡಿದೆ. ಇವರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅನು ಪ್ರಸನ್ನನ್ ಅವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ.
ಸುರೇಖಾ ಕೆ. ಮಲ್ಪೆಯ ಕೃಷ್ಣ ಮತ್ತು ಗಿರಿಜಾ ಮಬಿಯಾನ್ ದಂಪತಿಯ ಪುತ್ರಿಯಾಗಿದ್ದು, ಸದಾಶಿವ ಆದಿಉಡುಪಿ ಅವರ ಧರ್ಮಪತ್ನಿ ಹಾಗೂ ಸೂರಜ್ ಪೂಜಾರಿ ಮಲ್ಪೆ ಅವರ ಸಹೋದರಿಯಾಗಿದ್ದಾರೆ.
Next Story




