ಮ್ಯೂಸಿಕ ಸುಪ್ರಿಯಗೆ ಡಾಕ್ಟರೇಟ್ ಪದವಿ

ಉಡುಪಿ, ಮೇ 2: ಮಣಿಪಾಲ ಮಾಹೆ ವಿಶ್ವವಿದ್ಯಾಲಯದ ಎಂ.ಐ.ಟಿ.ಯ ಸ್ಕೂಲ್ ಆಫ್ ಕಂಪ್ಯೂಟರ್ ಇಂಜಿನಿಯರಿಂಗ್‌ನ ಸಹಾಯಕ ಪ್ರಾಧ್ಯಾಪಕಿ ಮ್ಯೂಸಿಕ ಸುಪ್ರಿಯ ಮಂಡಿಸಿದ ‘ಎ ಮಷೀನ್ ಟ್ರಾನ್ಸ್ಲೇಷನ್ ಸಿಸ್ಟಮ್ ಫಾರ್ ಕನ್ನಡ ಟು ಇಂಗ್ಲಿಷ್ ಅಂಡ್ ಇಂಗ್ಲಿಷ್ ಟು ಕನ್ನಡ’ ಎಂಬ ಮಹಾಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಎಂ.ಐ.ಟಿ.ಯ ಸ್ಕೂಲ್ ಆಫ್ ಕಂಪ್ಯೂಟರ್ ಇಂಜಿನಿಯ ರಿಂಗ್‌ನ ಡಾ.ದಿನೇಶ್ ಆಚಾರ್ಯ ಯು. ಹಾಗೂ ಡಾ.ಆಶಾಲತಾ ನಾಯಕ್ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ನಡೆಸಿದ್ದಾರೆ. ಇವರು ಸುಜಯ ಕೆ.ಎಸ್. ಹಾಗೂ ಎಸ್.ಎ.ಕೃಷ್ಣಯ್ಯ ದಂಪತಿ ಸುಪುತ್ರಿ ಹಾಗೂ ಅಭಿಜಿತ್ ಎಲ್.ಕೋಟ್ಯಾನ್ ಅವರ ಪತ್ನಿ.
Next Story




