Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ದೇಶದ ಪರಿಸರ ನಿರ್ವಹಣೆ ಸಮಗ್ರ ಅಧ್ಯಯನ...

ದೇಶದ ಪರಿಸರ ನಿರ್ವಹಣೆ ಸಮಗ್ರ ಅಧ್ಯಯನ ನಡೆದಿದ್ದೆ ಗಾಡ್ಗೀಳ್‌ರಿಂದ: ಡಾ.ಸುಭಾಶ್ಚಂದ್ರನ್

ವಾರ್ತಾಭಾರತಿವಾರ್ತಾಭಾರತಿ9 May 2026 8:20 PM IST
share
ದೇಶದ ಪರಿಸರ ನಿರ್ವಹಣೆ ಸಮಗ್ರ ಅಧ್ಯಯನ ನಡೆದಿದ್ದೆ ಗಾಡ್ಗೀಳ್‌ರಿಂದ: ಡಾ.ಸುಭಾಶ್ಚಂದ್ರನ್

ಉಡುಪಿ, ಮೇ 9: ದೇಶದಲ್ಲಿ ಪರಿಸರ ನಿರ್ವಹಣೆಯ ಕುರಿತಂತೆ ಮೊದಲ ಬಾರಿಗೆ ಸಮಗ್ರ ಅಧ್ಯಯನ ನಡೆದಿದ್ದೇ ಖ್ಯಾತ ಪರಿಸರ ವಿಜ್ಞಾನಿ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಶ್ರಮಿಸಿದ್ದ ಪ್ರೊ.ಮಾಧವ ಗಾಡ್ಗೀಳ್ ಅವರು ಎಂದು ಜನರ ಪರಿಸರ ವಿಜ್ಞಾನಿ ಎಂದೇ ಖ್ಯಾತಿ ಪಡೆದಿದ್ದರು ಎಂದು ಸುಮಾರು 30 ವರ್ಷಗಳ ಕಾಲ ಅವರ ಜೊತೆಗಾರ ನಾಗಿ ಎಲ್ಲಾ ಪರಿಸರ ಅಧ್ಯಯನಗಳಲ್ಲಿ ಭಾಗಿಯಾಗಿದ್ದ ಪರಿಸರ ವಿಜ್ಞಾನಿ ಡಾ.ಸುಭಾಶ್ಚಂದ್ರ ಎಂ.ಡಿ. ಹೇಳಿದ್ದಾರೆ.

ಭಾರತ ಜ್ಞಾನ-ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಪ್ರೊ.ಮಾಧವ ಗಾಡ್ಗೀಳ ನೆನಪಿನಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡ ಎರಡು ದಿನಗಳ ‘ಪರಿಸರ ಮತ್ತು ಶಿಕ್ಷಣ ಸಮ್ಮೇಳನ’ದಲ್ಲಿ ‘ಜನಬದುಕಿನ ಪರಿಸರ ವಿವೇಕ’ ಪ್ರೊ.ಮಾಧವ ಗಾಡ್ಗೀಳ್ ನೆನಪಿನ ಉಪನ್ಯಾಸ ನೀಡಿ ಮಾತನಾಡುತಿದ್ದರು.

ಪ್ರೊ.ಗಾಡ್ಗೀಳ್ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಪರಿಸರ ವಿಜ್ಞಾನ ಕೇಂದ್ರ ವನ್ನು (ಸೆಂಟರ್ ಫಾರ್ ಇಕಲಜಿ ಸಾಯನ್ಸ್)ನ್ನು ಸ್ಥಾಪಿಸಿದವರು ಪ್ರೊ.ಗಾಡ್ಗೀಳ್. ‘ಗಾಡ್ಗೀಳ್ ಸಮಿತಿ’ ಯ ಮುಖ್ಯಸ್ಥ ರಾಗಿ (ವೆಸ್ಟರ್ನ್ ಘಾಟ್ಸ್ ಇಕಲಜಿ ಎಕ್ಸ್‌ಫರ್ಟ್ ಪ್ಯಾನೆಲ್- ಡ್ಲ್ಯುಜಿಇಇಪಿ) ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗಾಗಿ 2011ರಲ್ಲಿ ನೀಡಿದ ವರದಿಯಲ್ಲಿ ಪಶ್ಚಿಮ ಘಟ್ಟಗಳ ಶೇ.64ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಶಿಫಾರಸ್ಸು ಮಾಡಿದ್ದರು.

ಪ್ರೊ.ಗಾಡ್ಗೀಳ್ ಅವರ ಅವಿರತ ಪರಿಶ್ರಮದಿಂದಾಗಿ 2002ರಲ್ಲಿ ಪರಿಸರ ಜೀವವೈವಿಧ್ಯ ಕಾನೂನು ಅನುಷ್ಠಾನ ಗೊಳ್ಳಲು ಸಾದ್ಯವಾಯಿತು. ಇದರಿಂದಾಗಿಯೇ ವಿಶ್ವದ 35 ಬಯೋಡೈವರ್ಸಿಟಿ ಹಾಟ್‌ಸ್ಪಾಟ್‌ಗಳಲ್ಲಿ ಪಶ್ಚಿಮ ಘಟ್ಟವೂ ಒಂದಾಗಿ ಗುರುತಿಸಿಕೊಳ್ಳಲು ಸಾದ್ಯವಾಯಿತು ಎಂದು ಡಾ.ಸುಭಾಶ್ಚಂದ್ರ ತಿಳಿಸಿದರು.

ಪರಿಸರ ಉಳಿಸಿ-ಬೆಳೆಸುವಲ್ಲಿ, ಅವುಗಳ ಸಂರಕ್ಷಣೆಯಲ್ಲಿ ಪ್ರೊ.ಗಾಡ್ಗೀಳ್ ಅವರು ಯುವಜನತೆಗೆ, ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಸ್ಪೂರ್ತಿಯಾಗಿದ್ದರು. ಪರಿಸರ ಸಂರಕ್ಷಣೆಯಲ್ಲಿ ಇಡೀ ಸಮಾಜದ ಪಾತ್ರ ಎಷ್ಟು ಮುಖ್ಯ ಎಂದು ಅವರು ಸದಾ ಕಾಲ ವಿವರಿಸಿ ಜನರನ್ನು ಪ್ರೋತ್ಸಾಹಿಸುತಿದ್ದರು ಎಂದವರು ನೆನಪಿಸಿಕೊಂಡರು.

ಪ್ರೊ.ಗಾಡ್ಗೀಗ್ ಒಬ್ಬ ಸರಳ ಸ್ವಭಾವದ ಸೀದಾ-ಸಾದಾ ಮನುಷ್ಯ. ವಿದೇಶ ಗಳಲ್ಲಿ ಕಲಿತು ಬಂದರೂ ಅವರು ದುರ್ಗಮ ಪಶ್ಚಿಮ ಘಟ್ಟದ ದಟ್ಟ ಕಾಡು ಗಳ ಮಧ್ಯೆ ವಾರಗಟ್ಟಲೆ ಅಲ್ಲಿನ ಜನರ ಮಧ್ಯೆ ಅವರೊಂದಿಗೆ ಒಬ್ಬರಾಗಿ ಸರಳವಾಗಿ ಬದುಕುತಿದ್ದರು ಎಂದರು.

ಕೊಡಗು, ಕರಾವಳಿಯಲ್ಲಿ ದೇವರಕಾಡು, ಮಲೆನಾಡಿನಲ್ಲಿ ಕಾನ ಎಂದು ಕರೆಸಿಕೊಳ್ಳುವ ತಲೆಮಾರುಗಳಿಂದ ಸಂರಕ್ಷಿತ ಕಾಡು ಪ್ರದೇಶವಾಗಿ ಉಳಿದುಬಂದ ದೇವರ ಕಾಡು ಪ್ರದೇಶದಲ್ಲಿ ಅವರ ಜೊತೆ ಅಧ್ಯಯನದಲ್ಲಿ ತಾನು ಪಾಲ್ಗೊಂಡಿರುವುದನ್ನು ವಿವರವಾಗಿ ತಿಳಿಸಿದ ಡಾ.ಸುಭಾಶ್ಚಂದ್ರ, ಅಲ್ಲಿ ಗುರುತಿಸಿದ ಅಸಂಖ್ಯಾತ ಜೀವವೈವಿಧ್ಯತೆಗಳ ಕತೆಗಳನ್ನು ಬಣ್ಣಿಸಿದರು.

ಪ್ರತಿ ಊರಿನ ಪ್ರತಿ ಶಾಲೆಗಳಲ್ಲಿ ಮಕ್ಕಳು ಹಾಗೂ ಶಿಕ್ಷಕರು ಆ ಪರಿಸರದ ಜೀವವೈವಿಧ್ಯತೆಯನ್ನು ಗುರುತಿಸಲು ವಿಶೇಷ ಯೋಜನೆಯೊಂದನ್ನು ಅವರು ರೂಪಿಸಿದ್ದು, ಅದರಂತೆ ಸಾಕಷ್ಟು ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕ ರೊಂದಿಗೆ ತಮ್ಮ ಪರಿಸರದ ಜೀವವೈವಿಧ್ಯತೆಯನ್ನು ಗುರುತಿಸಿ ನಮಗೆ ಕಳುಹಿಸಿದ್ದರು. ಇದನ್ನು ಕಂಡಾಗ ವಿದ್ಯಾರ್ಥಿಗಳ ಕೆಲಸದ ಬಗ್ಗೆ ನಮಗೆ ವಿಶೇಷ ಅಭಿಮಾನ ಮೂಡಿತ್ತು ಎಂದರು.

ದೇವರ ಕಾಡುಗಳು ನಮ್ಮ ವಾತಾವರಣದ ಸಮತೋಲನವನ್ನು ಕಾಪಾಡುವ ಕೆಲಸ ಮಾಡುವುದನ್ನು, ನೀರಿನ ಸಂರಕ್ಷಣೆಗೆ ನೆರವಾಗುವುದನ್ನು ಅವರ ತಂಡ ಜನತೆಯ ಮುಂದಿಟ್ಟಿತ್ತು. ಹೀಗೆ ಪರಿಸರ ನಿರ್ವಹಣೆಯ ಸಮಗ್ರ ಅಧ್ಯಯನವನ್ನು ಗಾಡ್ಗೀಳ್ ನೇತೃತ್ವದಲ್ಲಿ ನಡೆಸಲಾಗಿತ್ತು ಎಂದರು.

ಡಾ.ನಿರಂಜನ್ ಅವರು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದು, ಆದರ್ಶ ಕಟ್ಟಿಮನಿ ಸಮನ್ವಯಕಾರರಾಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X