ಶ್ರಮ ಸಂಹಿತೆ ಅಧಿಸೂಚನೆ ಪ್ರತಿ ದಹಿಸಿ ಕಾರ್ಮಿಕರಿಂದ ಪ್ರತಿಭಟನೆ

ಕುಂದಾಪುರ, ಮೇ 12: ಕೇಂದ್ರ ಸರಕಾರದ 4 ಶ್ರಮ ಸಂಹಿತೆಗಳನ್ನು ವಿರೋಧಿಸಿ ಸಿಐಟಿಯು ಕುಂದಾಪುರ ಸಂಚಾಲನ ಸಮಿತಿ ಮಂಗಳವಾರ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಶ್ರಮ ಸಂಹಿತೆಯ ಅಧಿಸೂಚನೆಯ ಕರಡು ಪ್ರತಿ ದಹಿಸುವುದರ ಮುಖಾಂತರ ಪ್ರತಿಭಟನೆ ನಡೆಸಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಇಡೀ ದೇಶದಾದ್ಯಂತ ಕಾರ್ಮಿಕರು, ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿದ್ದರೂ ಕೂಡ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಹೊಸ ಶ್ರಮ ಸಂಹಿತೆಯನ್ನು ಜಾರಿಗೆ ತರುತ್ತಿದೆ. ಈ ನಿಲುವನ್ನು ಸಿಐಟಿಯು ಖಂಡಿಸುವುದಾಗಿ ಹೇಳಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಎಚ್.ನರಸಿಂಹ, ಮಹಾಬಲ ವಡೆರಹೋಬಳಿ, ಬಲ್ಕೀಸ್, ಸುರೇಂದ್ರ, ಕಟ್ಟಡ ಸಂಘದ ಮುಖಂಡ ರಾದ ಶಶಿಕಾಂತ್, ಸುರ್ಧೀ, ರಾಜ ಬಿ.ಟಿ.ರ್ಆ, ರೆಹಮಾನ್, ಆಟೋ ಸಂಘದ ಮುಖಂಡರಾದ ರಾಜು ದೇವಾಡಿಗ ಉಪಸ್ಥಿತರಿದ್ದರು.
Next Story




