ಅಪರಿಚಿತ ವಾಹನ ಢಿಕ್ಕಿ: ಪಾದಚಾರಿ ಮೃತ್ಯು

ಕಾರ್ಕಳ, ಮೇ 13: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೇ 12ರಂದು ರಾತ್ರಿ ವೇಳೆ ಕಾರ್ಕಳ ಮಾಧವ ಪ್ರಕಾಶ ಕ್ಯಾಶೂ ಫ್ಯಾಕ್ಟರಿಯ ಎದುರುಗಡೆ ನಡೆದಿದೆ.
ಮೃತರನ್ನು ಮಿಯ್ಯಾರು ಕರಿಯಕಲ್ಲು ನಿವಾಸಿ ಪ್ರಸಾದ ಶೆಟ್ಟಿ(36) ಎಂದು ಗುರುತಿಸಲಾಗಿದೆ. ಇವರು ರಸ್ತೆ ದಾಡುತ್ತಿ ರುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ. ಇದರಿಂದ ರಸ್ತೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡು ಪ್ರಸಾದ್ ಶೆಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




