ಅಂದರ್ ಬಾಹರ್: ಐವರ ಬಂಧನ

ಬೈಂದೂರು, ಮೇ 15: ಉಪ್ಪುಂದ ಗ್ರಾಮದ ಪೂರ್ಣಿಮಾ ಬಾರ್ ಹಿಂಬದಿ ಮೇ 14ರಂದು ಮಧ್ಯಾಹ್ನ ವೇಳೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಿಜೂರು ಗ್ರಾಮದ ವಿಶ್ವನಾಥ ದೇವಾಡಿಗ(35), ಉಪ್ಪುಂದ ಗ್ರಾಮದ ಅಣ್ಣಪ್ಪ ಖಾರ್ವಿ(56), ಸುಬ್ರಹ್ಮಣ್ಯ ಖಾರ್ವಿ, ಕೃಷ್ಣ ಖಾರ್ವಿ(38), ಸುಬ್ರಹ್ಮಣ್ಯ ಖಾರ್ವಿ(38) ಬಂಧಿತ ಆರೋಪಿಗಳು. ಇವರಿಂದ 2,650ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




