ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕೊಲ್ಲೂರು, ಮೇ 15: ಕೌಟುಂಬಿಕ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 14ರಂದು ಸಂಜೆ ವೇಳೆ ವಂಡ್ಸೆ ಎಂಬಲ್ಲಿ ನಡೆದಿದೆ.
ಮೃತರನ್ನು ನಾಡ ಗ್ರಾಮದ ಸೂಲ್ಯಣ್ಣ ಶೆಟ್ಟಿ ಎಂಬವರ ಮಗ ಸುಧಾಕರ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ತನ್ನ ಹೆಂಡತಿ ಗುಣರತ್ನ ಹಾಗೂ ಬಾವ ನಾಗರಾಜ ಶೆಟ್ಟಿ ಎಂಬವರ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಲಾಗಿದೆ.
ಇವರು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ತನ್ನ ಬಾವ ಹಾಗೂ ಹೆಂಡತಿ ತೊಂದರೆ ನೀಡುತ್ತಿದ್ದು ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂಬುದಾಗೆ ಬರೆದುಕೊಂಡಿದ್ದು, ನಂತರ ಬೈಕಿನಲ್ಲಿ ತೆರಳಿದ ಅವರು, ಬೈಕನ್ನು ವಂಡ್ಸೆ ಸೇತುವೆ ಬಳಿ ನಿಲ್ಲಿಸಿ ಸೇತುವೆ ಮೇಲಿನಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




