ನಮ್ಮ ನಾಡ ಒಕ್ಕೂಡ ಉಡುಪಿ ಜಿಲ್ಲಾ ನೂತನ ಸಮಿತಿ ಪದಗ್ರಹಣ

ಉಡುಪಿ, ಮೇ 19: ನಮ್ಮ ನಾಡ ಒಕ್ಕೂಡ ಉಡುಪಿ ಜಿಲ್ಲಾ ಹಾಗೂ ಎಲ್ಲಾ ತಾಲೂಕು 2026-27ನೇ ಸಾಲಿನ ನೂತನ ಸಮಿತಿಯ ಪದಗ್ರಹಣ ಮತ್ತು ಗುರುತಿನ ಚಿಟಿ ವಿತರಣಾ ಕಾರ್ಯಕ್ರಮ ಉಡುಪಿಯ ಹೋಟೆಲ್ ಮಣಿಪಾಲ್ ಇನ್ ನಲ್ಲಿ ಮೇ 17ರಂದು ಜರಗಿತು.
ನಿರ್ಗಮಿತ ಅಧ್ಯಕ್ಷ ಮುಷ್ತಾಕ್ ಅಹ್ಮದ್ ಬೆಳ್ವೆ ನೂತನ ಅಧ್ಯಕ್ಷ ನಕ್ವಾ ಯಾಹ್ಯಾ ಅವರಿಗೆ ಅಧಿಕಾರ ಹಸ್ತಾಂತರಿಸಿ ದರು. ವಕೀಲ ಮೊಹಮ್ಮದ್ ಸುಹಾನ್ ನಾಯಕತ್ವ ಬೆಳೆಸುವ ಕುರಿತು ಮಾತನಾಡಿದರು. ಕೇಂದ್ರ ಸಮಿತಿಯ ನೂತನ ಅಧ್ಯಕ್ಷ ಡಾ.ರಿಜ್ವಾನ್ ಅಹ್ಮದ್, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಸಲೀಂ ಮಾತನಾಡಿದರು.
ಸಭೆಯಲ್ಲಿ ಕೇಂದ್ರ ಸಮಿತಿಯ ಟ್ರಸ್ಟಿಗಳಾದ ಪೀರು ಭಾಯ್, ಹಮೀದ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ನಜೀರ್ ನೇಜಾರು, ಮೊಹಮ್ಮದ್ ರಫೀಕ್ ಗಂಗೊಳ್ಳಿ, ಹರೂನ್ ರಶೀದ್ ಶಾಸ್ತಾನ್, ಮಮ್ದು ಇಬ್ರಾಹಿಂ ಸಾಹೇಬ್, ಮೊಹಮ್ಮದ್ ಇರ್ಫಾನ್, ತಾಲೂಕು ಘಟಕಗಳ ಅಧ್ಯಕ್ಷರಾದ ಇಬಾದ್ ಉಸ್ಮಾನ್, ಜಮಾಲ್ ಗುಲ್ವಾಡಿ, ಸಯ್ಯದ್ ಅಜ್ಮಿಲ್, ಅನ್ಸಾರ್ ಹೊಸಂಗಡಿ, ಶಾಕಿರ್ ಹಾವಂಜೆ, ಮೊಹಮ್ಮದ್ ಮುಸ್ತಫಾ ಹಾಗೂ ಜಿಲ್ಲಾ ಕಾರ್ಯದರ್ಶಿ ಫಾಜಿಲ್ ಆದಿಉಡುಪಿ ಉಪಸ್ಥಿತರಿದ್ದರು.
ಹೆಬ್ರಿ ಘಟದ ಕೋಶಾಧಿಕಾರಿ ಮೊಹಮ್ಮದ್ ರೆಯಾನ್ ಬೆಳ್ವೆ ಕಿರಾತ್ ಪಠಿಸಿದರು. ನಿಹಾರ್ ಅಹಮದ್ ಕುಂದಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಹೀರ್ ನಾಕುದ ಸ್ವಾಗತಿಸಿದರು. ಜಫ್ರುಲ್ಲಾ ಹುಡೆ ಕಾರ್ಯಕ್ರಮ ನಿರೂಪಿಸಿದರು. ಅಬ್ಬು ಮೊಹಮ್ಮದ್ ಕುಂದಾಪುರ ವಂದಿಸಿದರು.






