ಮಂಗಳೂರು ಜಂಕ್ಷನ್- ಮುಂಬೈ ರೈಲು ಸಂಚಾರದಲ್ಲಿ ವ್ಯತ್ಯಯ

ಉಡುಪಿ: ಮುಂಬೈ ಸಿಎಸ್‌ಎಂಟಿ ನಿಲ್ದಾಣದ ಪ್ಲಾಟ್‌ಫಾರಂ ವಿಸ್ತರಣಾ ಕಾಮಗಾರಿಯನ್ನು ಇನ್ನು 10 ದಿನಗಳ ಕಾಲ ಮುಂದುವರಿಸಲು ಕೇಂದ್ರ ರೈಲ್ವೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಮುಂದುವರಿಯಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಮಂಗಳೂರು ಜಂಕ್ಷನ್ ಹಾಗೂ ಮುಂಬೈ ಸಿಎಸ್‌ಎಂಟಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವನ್ನು ಮೇ 20ರಿಂದ 29ರವರೆಗೆ ಥಾಣೆಯಲ್ಲೇ ಮುಕ್ತಾಯಗೊಳಿಸಲಾಗುತ್ತದೆ. ಅದೇ ರೀತಿ ಮಡಗಾಂವ್ ಜಂಕ್ಷನ್ ಹಾಗೂ ಮುಂಬಯಿ ಸಿಎಸ್‌ಎಂಟಿ ನಡುವಿನ ತೇಜಸ್ ರೈಲಿನ ಸಂಚಾರವನ್ನು ದಾದರ್‌ನಲ್ಲೇ ಕೊನೆಗೊಳಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Next Story




