ನಿವೃತ್ತ ಶಿಕ್ಷಣಾಧಿಕಾರಿ ಕೊಕ್ಕರ್ಣೆ ರಾಜೀವ ಶೆಟ್ಟಿ ನಿಧನ

ಕುಂದಾಪುರ, ಮೇ 22: ಕುಂದಾಪುರ ತಾಲೂಕು ನಿವೃತ್ತ ಶಿಕ್ಷಣಾಧಿಕಾರಿ ಕೊಕ್ಕರ್ಣೆ ಬಂಡ್ಸಾಲೆ ಮನೆಯ ರಾಜೀವ್ ಶೆಟ್ಟಿ(95) ವಯೋ ಸಹಜತೆ ಯಿಂದ ಆಸೋಡಿನ ತಮ್ಮ ಸ್ವಗೃಹ ಮೇ 22ರಂದು ನಿಧನರಾದರು.
ರಾಜೀವ್ ಶೆಟ್ಟಿ ದೀರ್ಘ ಕಾಲ ಹೈಸ್ಕೂಲ್ ಶಿಕ್ಷಕರಾಗಿ ಕುಂದಾಪುರ ತಾಲೂಕಿನ ವಿವಿಧ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಂತರ ನಿವೃತ್ತರಾಗಿದ್ದರು. ಇವರು ಉಡುಪಿ ಎಂಜಿಎಂ ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿ ಕಾಲೇಜಿನ ಸಂಸ್ಥಾಪಕ ಡಾ.ಮಾಧವ ಪೈ ಅವರ ಪ್ರೀತಿಗೂ ಪಾತ್ರರಾದವರು. ದಿ.ಟಿ.ಮೋಹನದಾಸ್ ಪೈ, ನಾಗಲ್ಯಾಂಡ್ ಮಾಜಿ ರಾಜ್ಯಪಾಲ ದಿ.ಪಿ.ಬಿ.ಆಚಾರ್ಯ, ಪ್ರೊ.ಶ್ರೀಶ ಬಲ್ಲಾಳ್‌ರ ಜೊತೆ ಎಂಜಿಎಂ ಕಾಲೇಜಿನಲ್ಲಿ ಒಟ್ಟಿಗೆ ಕಲಿತ ಹೆಗ್ಗಳಿಕೆಗೆ ಇವರಿಗೆ ಸಲ್ಲುತ್ತದೆ.
ರಾಜೀವ್ ಶೆಟ್ಟಿ ನಿಧನದಿಂದಾಗಿ ಎಂಜಿಎಂ. ಕಾಲೇಜಿನ ಪ್ರಥಮ ಬ್ಯಾಚಿನ ಕೊಂಡಿ ಸಂಪೂರ್ಣವಾಗಿ ಕಳಚಿಕೊಂಡಿದೆ. ಇವರು ಕೆಎಂಎಫ್‌ನ ನಿವೃತ್ತ ಹಿರಿಯ ಪಶು ವೈದ್ಯಾಧಿಕಾರಿ ಸಹಿತ ಇಬ್ಬರು ಪುತ್ರರು ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story




