ನದಿಗೆ ಬಿದ್ದು ಮಹಿಳೆ ಮೃತ್ಯು

ಬ್ರಹ್ಮಾವರ, ಮೇ 22: ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹಂದಾಡಿ ಗ್ರಾಮದ, ಬೆಣ್ಣೆಕುದ್ರು ಎಂಬಲ್ಲಿ ನಡೆದಿದೆ.
ಮೃತರನ್ನು ಹಂದಾಡಿ ಗ್ರಾಮದ ಮೀನಾಕ್ಷಿ(65) ಎಂದು ಗುರುತಿಸ ಲಾಗಿದೆ. ಇವರು ಮೇ 19ರಂದು ಮನೆಯಿಂದ ಹೋದವರು ನಾಪತ್ತೆ ಯಾಗಿದ್ದು, ಹುಡುಕಾಡಿದಾಗ ಇವರ ಮೃತದೇಹ ಮೇ 22ರಂದು ಬೆಳಗ್ಗೆ ಬೆಣ್ಣೆಕುದ್ರು ಸೀತಾನದಿಯ ತೀರದಲ್ಲಿ ಪತ್ತೆಯಾಗಿದೆ. ಮನೆ ಬಿಟ್ಟು ನದಿಯ ತಟಕ್ಕೆ ಹೋದ ಇವರು, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




