ಕೋಳಿ ಅಂಕ: ಇಬ್ಬರ ಬಂಧನ

ಹೆಬ್ರಿ, ಮೇ 23: ನಾಲ್ಕೂರು ಗ್ರಾಮದ ಚಂದಾಲ್‌ಕಟ್ಟೆ ಗೇರು ಪ್ಲಾಂಟೇಷನ್ ಎಂಬಲ್ಲಿ ಮೇ 20ರಂದು ಕೋಳಿ ಅಂಕ ನಡೆಸುತ್ತಿದ್ದ ಇಬ್ಬರನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಶೇಖರ ಪೂಜಾರಿ ಹಾಗೂ ಬಸವ ಕುಲಾಲ್ ಬಂಧಿತ ಆರೋಪಿಗಳು. ಪೊಲೀಸ್ ದಾಳಿ ವೇಳೆ ಕೆಲವರು ಓಡಿ ಹೋಗಿ ದ್ದಾರೆ. ಆರೋಪಿಗಳಿಂದ 2800ರೂ. ಮೌಲ್ಯದ ನಾಲ್ಕು ಕೋಳಿ ಹುಂಜ, 3 ಕೋಳಿ ಬಾಳು ಹಾಗೂ 1000ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




