ಸಾರ್ವಜನಿಕ ಶಾಂತಿಭಂಗ ಆರೋಪ: ನಾಲ್ವರು ವಶಕ್ಕೆ

ಕುಂದಾಪುರ, ಮೇ 23: ಕುಂದಾಪುರ ಚರ್ಚ್ ರೋಡ್‌ನಿಂದ ಕೋಡಿಗೆ ಸಂಪರ್ಕಿಸುವ ಸೇತುವೆ ಮೇಲೆ ಪರಸ್ಪರ ಗಲಾಟೆ ಮಾಡಿ ಶಾಂತಿ ಭಂಗ ಉಂಟು ಮಾಡುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಕುಂದಾಪುರದ ನವೀನ, ಕೋಡಿಯ ಪ್ರಶಾಂತ್ ಹಾಗೂ ಗಣೇಶ್, ಹಂಗಳೂರಿನ ವಿಘ್ನೇಶ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದು, ಹೋವಿನಟೆಬಲ್ ಮಹೇಶ್, ನಿಶಾಂತ ಹಾಗೂ ಇತರರು ಓಡಿ ಹೋಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




