ಸಮುದ್ರಕ್ಕೆ ಬಿದ್ದು ಯುವಕ ನಾಪತ್ತೆ

ಉಡುಪಿ, ಮೇ 26: ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಶಂಕರಗೌಡ ಶಿವಪ್ಪ ಆಡೂರ (26) ಎಂಬ ಯುವಕ ಮೇ 17ರಂದು ಸಮುದ್ರದಲ್ಲಿ ಮೀನುಗಾರಿಕಾ ಬಲೆಯನ್ನು ಎಳೆಯುತ್ತಿದ್ದ ಸಂದರ್ಭದಲ್ಲಿ ಬೋಟು ಅಲುಗಾಡಿದ ಪರಿಣಾಮ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ಕಾಣೆಯಾಗಿದ್ದಾರೆ.
5 ಅಡಿ 3 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆ ದೂ.ಸಂ: 0820-2537999, ಮಲ್ಪೆ ಪಿಎಸ್‌ಐ ಸಂಖ್ಯೆ: 9480805447, ಮಲ್ಪೆ ವೃತ್ತ ನಿರೀಕ್ಷಕರ ಸಂಖ್ಯೆ: 9480805430 ಅನ್ನು ಸಂಪರ್ಕಿಸುವಂತೆ ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.
Next Story




