ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ಉತ್ತರಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ

ಉಡುಪಿ, ಮೇ 29: ಒಂದು ಲಕ್ಷ ರೂ.ನಗದು ಬಹುಮಾನ ಸಹಿತ ಕುಂಭಾಶಿಯ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕಳೆದ ವರ್ಷದಿಂದ ನೀಡುತ್ತಿರುವ ‘ಉತ್ತರಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ’ಗೆ ಈ ಬಾರಿ ಉಡುಪಿಯ ಯಕ್ಷಗಾನ ಕಲಾರಂಗ ಭಾಜನವಾಗಿದೆ.
ಇದರೊಂದಿಗೆ ಪ್ರತಿಷ್ಠಾನ ಕಳೆದ ಕೆಲವು ವರ್ಷಗಳಿಂದ ಯಕ್ಷಗಾನದ ಮೇರು ನಟ ಕೊಂಡದಕುಳಿ ರಾಮ ಹೆಗಡೆ ಹೆಸರಿ ನಲ್ಲಿ ನೀಡುತ್ತಿರುವ ಪ್ರಶಸ್ತಿಯನ್ನು ಸಹ ಈ ಬಾರಿ ಯಕ್ಷಗಾನ ಕಲಾರಂಗಕ್ಕೆ ನೀಡಿ ಗೌರವಿಸಲಾ ಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಮೇ 31ರ ರವಿವಾರ ಅಪರಾಹ್ನ 2:30ಕ್ಕೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಕೊಂಡದಕುಳಿ ರಾಮಚಂದ್ರ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಕ್ಷಗಾನ ಕಲಾ ಸಾಧಕರಿಗೆ ನೀಡುವ ಕೊಂಡಕುಳಿ ರಾಮ ಹೆಗಡೆ ಪ್ರಶಸ್ತಿಯನ್ನು ಈವರೆಗೆ 34 ಮಂದಿ ಕಲಾವಿದ ರಿಗೆ ನೀಡಿ ಗೌರವಿಸಲಾಗಿದೆ. ಕಳೆದ ವಷರ್ ಕಲೆ, ಸಾಹಿತ್ಯ, ಸಂಗೀತ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಮಹಾನ್ ಸಾಧಕರಿಗೆ, ಸಂಘಟನೆಗೆ ನೀಡಲು ಉದ್ದೇಶಿಸಿರುವ ‘ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ’ಯನ್ನು ವಿದ್ವಾಂಸ ಶತಾವಧಾನಿ ಡಾ.ಆರ್. ಗಣೇಶ್‌ಗೆ ಪ್ರದಾನ ಮಾಡಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.




