ಬೆಸ್ಟ್ ಪೋಸ್ಟ್‌ಮ್ಯಾನ್ ಪ್ರಶಸ್ತಿ ವಿಜೇತ ಚಂದ್ರಯ್ಯ ಆಚಾರ್ಯ ನಿಧನ

ಹೆಬ್ರಿ, ಮೇ 29: ತಾಲೂಕಿನ ಮುನಿಯಾಲು ಗ್ರಾಮದ ಪಡುಕುಡೂರು ನಿವಾಸಿ ನಿವೃತ್ತ ಪೋಸ್ಟ್ ಮ್ಯಾನ್ ಚಂದ್ರಯ್ಯ ಆಚಾರ್ಯ (82) ಬುಧವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
1964ರಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಸೇವೆಗೆ ಸೇರ್ಪಡೆಗೊಂಡು 1978ರ ತನಕ ಎಳ್ಳಾರೆ ಪಡುಕುಡೂರು ಭಾಗದ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದರು. 1978 ರಿಂದ 1992 ವರೆಗೆ ಮಂಗಳೂರು ಹಾಗು 2003ರವರೆಗೆ ಕಾರ್ಕಳದಲ್ಲಿ ಸೇವೆ ಸಲ್ಲಿಸಿ ಜನರ ಅಪಾರ ಪ್ರೀತಿಗೆ ಪಾತ್ರರಾಗಿದ್ದರು. 40 ವರ್ಷಗಳ ವಿಶೇಷ ಸಾರ್ಥಕ ಸೇವೆಯನ್ನು ಪರಿಗಣಿಸಿ ಚಂದ್ರಯ್ಯ ಆಚಾರ್ಯ ಅವರಿಗೆ ಭಾರತೀಯ ಅಂಚೆ ಇಲಾಖೆಯು ಬೆಸ್ಟ್ ಪೋಸ್ಟ್ ಮ್ಯಾನ್ ಪ್ರಶಸ್ತಿ ನೀಡಿ ಗೌರವಿಸಿತ್ತು.
Next Story




