ನದಿಗೆ ಬಿದ್ದು ಯುವಕ ಮೃತ್ಯು

ಕಾರ್ಕಳ, ಮೇ 29:ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇಷಾನ್ ಪಾಶಾ (40) ಎಂಬವರು ಮನೆಯ ಬಳಿ ಇರುವ ಶಾಂಭವಿ ನದಿಗೆ ಅಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.
ಮೂಲತ: ಮೈಸೂರು ಜಿಲ್ಲೆ ಪಿರಿಯಾಪಟ್ಟಣದವರಾದ ಇಷಾನ್ ಪಾಶಾ ಏಳು ತಿಂಗಳ ಹಿಂದೆ ಶಮೀನ್ ಎಂಬವ ರನ್ನು ಮದುವೆಯಾಗಿ ಜಾರಿಗೆಕಟ್ಟೆಯಲ್ಲಿ ವಾಸವಾಗಿದ್ದು, ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಮೇ 25ರಂದು ಜೋಕಟ್ಟೆಯ ತಂಗಿಯ ಮನೆಯಿಂದ ಬಂದು ಕೆಲಸಕ್ಕೆ ಹೋಗುವು ದಾಗಿ ಹೇಳಿ ಮನೆಯಿಂದ ಹೋದವರು ನಾಪತ್ತೆ ಯಾಗಿದ್ದರು. ಗುರುವಾರ ಸಂಜೆ 5ಗಂಟೆ ಸುಮಾರಿಗೆ ಅವರ ಶವ ಕೊಳೆತ ಸ್ಥಿತಿಯಲ್ಲಿ ಶೆಟ್ಟಿಬೆಟ್ಟು ಎಂಬಲ್ಲಿ ಶಾಂಭವಿ ನದಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




