ಕುಂದಾಪುರ: ಪ್ರಾಕೃತಿಕ ವಿಕೋಪ ನಿರ್ವಹಣೆಗೆ ತುರ್ತು ಸೇವಾ ಕೇಂದ್ರ, ಸಹಾಯವಾಣಿ ಸ್ಥಾಪನೆ

ಉಡುಪಿ, ಜೂ.3: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲದ ಸಮಯದಲ್ಲಿ ಅವಘಡಗಳನ್ನು ತಪ್ಪಿಸಲು ಮತ್ತು ಸಾರ್ವಜನಿಕರ ಸುರಕ್ಷತೆ ಗಾಗಿ ಕುಂದಾಪುರ ಪುರಸಭೆಯ ವತಿಯಿಂದ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಹೆಲ್ಪ್‌ಲೈನ್ (ಸಹಾಯವಾಣಿ) ಕೇಂದ್ರವನ್ನು ತೆರೆಯಲಾಗಿದ್ದು, ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹ, ಸಾಂಕ್ರಾಮಿಕ ರೋಗಗಳು ಮತ್ತು ಇತರೆ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸಾರ್ವಜನಿಕರು ಹೆಲ್ಪ್‌ಲೈನ್ ಸಂಖ್ಯೆ :08254-230410ಗೆ ಕರೆ ಮಾಡಬಹುದು.
ಮಳೆಗಾಲದ ಸಮಯದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು: ಅಪಾಯಕಾರಿ ಕಟ್ಟಡಗಳಿಂದ ದೂರವಿರಬೇಕು - ಮಳೆಯಿಂದಾಗಿ ಕುಸಿಯುವ ಹಂತದಲ್ಲಿರುವ ಹಳೆಯ ಗೋಡೆ ಅಥವಾ ಕಟ್ಟಡಗಳ ಆಸುಪಾಸಿ ನಲ್ಲಿ ಆಶ್ರಯ ಪಡೆಯಬಾರದು. ವಿದ್ಯುತ್ ಕಂಬಗಳಿಂದ ಎಚ್ಚರ - ರಸ್ತೆ ಬದಿಯ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್ ಗಳು ಹಾಗೂ ಜೋತಾಡುವ ವಿದ್ಯುತ್ ತಂತಿಗಳನ್ನು ಮುಟ್ಟಬಾರದು.
ಮರಗಳ ಕೆಳಗೆ ನಿಲ್ಲಬಾರದು - ಬಿರುಗಾಳಿ ಸಹಿತ ಭಾರಿ ಮಳೆ ಬರುವಾಗ ದೊಡ್ಡ ಮರಗಳು ಅಥವಾ ಜಾಹೀರಾತು ಫಲಕಗಳ (ಹೋರ್ಡಿಂಗ್ಸ್) ಕೆಳಗೆ ವಾಹನ ನಿಲ್ಲಿಸುವುದನ್ನು ತಪ್ಪಿಸಬೇಕು. ತ್ಯಾಜ್ಯ ವಿಲೇವಾರಿ - ಒಣ ಮತ್ತು ಹಸಿ ಕಸವನ್ನು ಚರಂಡಿಗಳಿಗೆ ಎಸೆಯಬಾರದು. ಇದು ಚರಂಡಿ ಬ್ಲಾಕ್ ಆಗಿ ನೀರು ರಸ್ತೆಗೆ ನುಗ್ಗಲು ಕಾರಣವಾಗುತ್ತದೆ.
ಮಳೆಗಾಲದ ಸಂಧರ್ಭದಲ್ಲಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮೊ. ಸಂಖ್ಯೆ :9880034793, ಪರಿಸರ ಅಭಿಯಂತರು ಮೊ. ಸಂಖ್ಯೆ: 7353255268, ಹಿರಿಯ ಆರೋಗ್ಯ ನಿರೀಕ್ಷಕರು ಮೊ.ಸಂಖ್ಯೆ 6360027331 ಹಾಗೂ ಕಿರಿಯ ಅಭಿಯಂತರರು ಮೊ.ನಂ: 9902377287 ಅನ್ನು ಸಂಪರ್ಕಿಸಬಹುದು ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.






