ಚಿತ್ತೂರು: ಪ್ರೌಢಶಾಲೆ ದಾರಿಯಲ್ಲಿ ಅಪಾಯಕಾರಿ ಮರಗಳು

ಕುಂದಾಪುರ, ಜೂ.6: ವಂಡ್ಸೆ ಕಡೆಯಿಂದ ಕೊಲ್ಲೂರು ಮಾರ್ಗವಾಗಿ ಸಾಗುವಾಗ ಚಿತ್ತೂರು ಪೆಟ್ರೋಲ್ ಪಂಪ್ ಎದುರುಗಡೆ ಪ್ರೌಢಶಾಲೆಗೆ ಹೋಗುವ ದಾರಿಯಲ್ಲಿ ಮರಗಳು, ಮರದ ಗೆಲ್ಲುಗಳು ಬೀಳುವ ಅಪಾಯಕಾರಿ ಸ್ಥಿತಿಯಲ್ಲಿವೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 300ಕ್ಕೂ ಮಿಕ್ಕಿ ಮಕ್ಕಳು ಇದೇ ದಾರಿಯಾಗಿ ಶಾಲೆಗೆ ತೆರಳುತ್ತಿದ್ದಾರೆ. ಈಗಾಗಲೇ ಮಳೆಗಾಲ ಪ್ರಾರಂಭಗೊಂಡಿದ್ದು ಪ್ರಾರಂಭದಲ್ಲಿ ಇರುವ ಗಾಳಿ ಮಳೆಗೆ ದಾರಿಯಲ್ಲಿರುವ ಅಪಾಯಕಾರಿ ಮರಗಳು ಬಿದ್ದು ಅನಾಹುತಗಳು ಸಂಭವಿಸುವ ಮುನ್ನ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ರಾಜ್ಯ ನಿರ್ದೇಶಕ ಅಬ್ದುಲ್ ಸಲಾಂ ಚಿತ್ತೂರು ಒತ್ತಾಯಿಸಿದ್ದಾರೆ.
Next Story




