ಕೇಂದ್ರ ಬಿಜೆಪಿ ಸರಕಾರ ಜನಾಕ್ರೋಶಕ್ಕೆ ಬಲಿಯಾಗಲಿದೆ: ರಮೇಶ್ ಕಾಂಚನ್

ಉಡುಪಿ: ಪ್ರತಿದಿನ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸ್ಲೋ ಪಾಯ್ಸನ್ ನೀಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಟೀಕಿಸಿದ್ದಾರೆ.
ಅಧಿಕಾರಕ್ಕೆ ಬರುವ ಮೊದಲು ಅಚ್ಚೇ ದಿನ್ ಕೊಡುತ್ತೇವೆ ಎಂದು ದೇಶದ ಜನರಿಗೆ ಭರವಸೆ ನೀಡಿದ ಮೋದಿ ಅಧಿಕಾರಕ್ಕೆ ಬಂದ ಬಳಿಕ ದಿನಂಪ್ರತಿ ಬೆಲೆ ಏರಿಕೆಯನ್ನು ಮಾಡುವ ಮೂಲಕ ದೇಶದ ಜನರಿಗೆ ದ್ರೋಹವನ್ನು ಬಗೆದಿದ್ದಾರೆ. ಅದಾನಿ, ಅಂಬಾನಿಯವರ ಹಿತಾಸಕ್ತಿಗಾಗಿ ದೇಶದ ಜನರ ಬದುಕು ದುಸ್ತರಗೊಳ್ಳುವಂತೆ ಮಾಡುತ್ತಿದ್ದಾರೆ.
ಪ್ರತಿ ದಿನ ಸ್ವಲ್ಪ ಸ್ವಲ್ಪವೇ ಬೆಲೆ ಏರಿಕೆಯನ್ನು ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ತಂತ್ರಗಾರಿಕೆಯು ಜನರಿಗೆ ಸ್ಲೋ ಪಾಯ್ಸನನ್ನು ನೀಡುವ ಕ್ರಿಮಿನಲ್ ಮನಸ್ಥಿತಿಯಾಗಿದೆ. ಈ ಮನಸ್ಥಿತಿಯ ಸರಕಾರ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲದ ಬೆಲೆಯನ್ನು ದಿನಂಪ್ರತಿ ಸ್ವಲ್ಪ ಸ್ವಲ್ಪವೇ ಏರಿಕೆಯನ್ನು ಮಾಡಿ ದೇಶದ ಜನರನ್ನು ಆರ್ಥಿಕ ವಾಗಿ ಸಾಯಿಸುತ್ತಿದೆ. ಮೋದಿ ಸರ್ಕಾರ ಸ್ಲೋ ಪಾಯ್ಸನ್ ನೀಡುವ ತಂತ್ರಗಾರಿಕೆ ದೇಶದ ಜನರಿಗೆ ಇದೀಗ ಅರ್ಥ ವಾಗುತ್ತಿದ್ದು ಕೇಂದ್ರದ ಬಿಜೆಪಿ ಸರ್ಕಾರ ಜನಾಕ್ರೋಶಕ್ಕೆ ಬಲಿಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






