ಅಂದರ್ ಬಾಹರ್: ಮೂವರ ಬಂಧನ

ಹೆಬ್ರಿ, ಜೂ.7: ಹೆಬ್ರಿ ಗ್ರಾಮದ ಹೊಸೂರು ಎಂಬಲ್ಲಿ ಜೂ.6ರಂದು ಸಂಜೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ 15 ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ವಿಜೇಶ್, ದಸ್ತಗೀರ್ ಹಾಗೂ ರೋಹಿತ್ ಎಂಬವರನ್ನು ಬಂಧಿಸಿದರು. ನಿತಿನ್ ಮಂಗಳೂರು, ಮಂಗಳೂರಿನ ಪಡು, ಕಿಶೋರ್ ಪಂಪ್ವೆಲ್, ಮೂಲ್ಕಿ ಸಿದ್ದು ಶೆಟ್ಟಿ, ಮೂಲ್ಕಿ ರಂಗನಾಥ, ಮೂಲ್ಕಿ ರಫೀಕ್, ನಿತಿನ್ ಮಂಗಳೂರು, ನಜೀರ್ ಬೆಳ್ತಂಗಡಿ, ಚೇತನ ಬರ್ಕೆ, ಕಿಶೋರ್ ಪಾಂಗಾಳ, ವಿಜಯ ಶೆಟ್ಟಿ ಕಾರ್ಕಳ, ಮಹೇಶ್ ಜಾರ್ಕಳ, ಮಹಾದೇವ ನಾಯ್ಕ ಭಟ್ಕಳ, ಮೂಲ್ಕಿಯ ಇಮ್ರಾನ್, ಕಾರಿನ ಚಾಲಕ ಹಾಗೂ ಇತರರು ಅಲ್ಲಿಂದ ಓಡಿಹೋಗಿರುವುದಾಗಿ ತಿಳಿದುಬಂದಿದೆ.
ಬಂಧಿತರಿಂದ 23,970ರೂ. ಹಣ ಹಾಗೂ 35,000ರೂ. ಮೌಲ್ಯದ ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳ ಲಾಗಿದೆ. 13,07,370ರೂ. ಮೌಲ್ಯದ ಮೂರು ಕಾರು ಹಾಗೂ 3 ದ್ವಿಚಕ್ರಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




