ಗಾರೆ ಕೆಲಸಗಾರ ನಾಪತ್ತೆ

ಪಡುಬಿದ್ರಿ, ಜೂ.17: ಗಾರೆ ಕೆಲಸಕ್ಕೆ ಮಡಿಕೇರಿಗೆ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ನಡ್ಸಾಲು ಗ್ರಾಮದ ಕಲ್ಲಟ್ಟೆ ನಿವಾಸಿ ಮೋಹನ್(48) ಎಂಬವರು ಮೇ 26ರಂದು ಸಂಜೆ ಸ್ನೇಹಿತ ಹರೀಶ್ ಎಂಬವರೊಂದಿಗೆ ಮಡಿಕೇರಿಗೆ 15 ದಿನಗಳ ಗಾರೆ ಕೆಲಸ ನಿಮಿತ್ತ ಹೋಗಿದ್ದು, ಎರಡು ದಿನಗಳ ಬಳಿಕ ಹರೀಶ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story




