ಅಪಘಾತ: ಅಪ್ರಾಪ್ತ ಕಾರು ಚಾಲಕ, ಪೋಷಕರ ವಿರುದ್ಧ ಪ್ರಕರಣ ದಾಖಲು

ಮಣಿಪಾಲ, ಜೂ.17: ಪರ್ಕಳ ನೇತಾಜಿ ನಗರ ಎಂಬಲ್ಲಿ ಜೂ.16ರಂದು ಸಂಜೆ 6.30ರ ಸುಮಾರಿಗೆ ಅಪ್ರಾಪ್ತ ಬಾಲಕನೋರ್ವ ಚಲಾಯಿಸುತ್ತಿದ್ದ ಕಾರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು, ಈ ಸಂಬಂಧ ಬಾಲಕ ಹಾಗೂ ಆತನ ಪೋಷಕರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇತಾಜಿ ನಗರ ಕಡೆಯಿಂದ ಪ್ರಗತಿ ನಗರದ ಕಡೆಗೆ ಬಡಗುಬೆಟ್ಟು ಗ್ರಾಮದ ಮಹಮ್ಮದ್ ಸೈಫ್(17) ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಕಾರು, ಮನೆಯ ಹೊರಗಡೆ ರಸ್ತೆ ಬದಿ ನಿಲ್ಲಿಸಿದ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರ ಪರಿಣಾಮ ಸ್ಕೂಟರ್ ಮನೆಯ ಕಂಪೌಂಡಿಗೆ ತಾಗಿ ಬಿದ್ದಿತ್ತು. ಇದರಿಂದ ಸ್ಕೂಟರ್ ರಸ್ತೆಗೆ ಬಿದ್ದು ಜಖಂಗೊಂಡಿದೆ.
ಕಾರು ಚಾಲಕ ಮಹಮ್ಮದ್ ಸೈಫ್ ಹಾಗೂ ಅಪ್ರಾಪ್ತ ಬಾಲಕನಿಗೆ ಕಾರನ್ನು ಚಲಾಯಿಸಲು ನೀಡಿದ ಕಾರಿನ ಮಾಲಕ ಸಲೀಂ ಎಂಬವರ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




