ನಿವೃತ್ತ ಯೋಧ ಗೋಪಾಲಕೃಷ್ಣ ರಾವ್ ನಿಧನ

ಉಡುಪಿ, ಜೂ.20: ನಿವೃತ್ತ ಯೋಧ ಯು.ಕೆ. ಗೋಪಾಲಕೃಷ್ಣ ರಾವ್ (92) ಅವರು ಶುಕ್ರವಾರ ಮಣಿಪಾಲದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಭಾರತೀಯ ಸೇನೆಯ ಅಂಗಸಂಸ್ಥೆಯಾದ ಜಿಆರ್‌ಇಎಎಫ್ (ಬಿಆರ್‌ಓ) ಇಲ್ಲಿ ಫಾರ್ಮಸಿಸ್ಟ್ ವೃತ್ತಿಯಲ್ಲಿ ಸುಮಾರು 24 ವರ್ಷ ಅವರು ಸೇವೆ ಸಲ್ಲಿಸಿದ್ದಾರೆ.
ಉತ್ತರ ಭಾರತದ ಜೋಶಿಮಠ, ಅರುಣಾಚಲಪ್ರದೇಶ, ಸಿಕ್ಕಿಂ, ಅಂಡಮಾನ್ ನಿಕೋಬಾರ್ ಹಾಗೂ ಭೂತಾನ್‌ನಲ್ಲಿ ಇವರು ತಮ್ಮ ವೃತ್ತಿ ಜೀವನ ನಡೆಸಿದ್ದರು. ಇವರ ಸೇವೆಯನ್ನು ಗುರುತಿಸಿ ಭಾರತೀಯ ಸೇನೆಯು ಸಂಗ್ರಾಮ್ ಸೇವಾ ಮೆಡೆಲ್ ಮತ್ತು ವಿದೇಶ್ ಸೇವಾ ಮೆಡಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಉಡುಪಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ಪರ್ಯಾಯ ಅವಧಿಯಲ್ಲಿ ಗೋಪಾಲಕೃಷ್ಣ ರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದ್ದರು. ಮೃತರು ಪತ್ನಿ ಶಾಂತಾ ಜಿ. ರಾವ್, ಐವರು ಪುತ್ರಿ ಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story




