ಡ್ರಗ್ಸ್ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಕರೆ

ಕಾಪು, ಜೂ.21: ಯುವ ಸಮೂಹವು ಮಾದಕ ದ್ರವ್ಯದಂತಹ ಚಟಗಳಿಂದ ದೂರ ಉಳಿಯುವ ನಿಟ್ಟಿನಲ್ಲಿ ಸಮಾಜ ದಲ್ಲಿ ಜಾಗೃತಿ ಮೂಡಿಸುವ ಅಭಿಯಾನ ವನ್ನು ಎಲ್ಲಾ ಮೊಹಲ್ಲಾಗಳನ್ನು ನಡೆಸುವಂತೆ ಸುನ್ನೀ ಮೇನೆಜ್ಮೆಂಟ್ ಅಸೋಸಿಯೇಷನ್ ಉಡುಪಿ ಜಿಲ್ಲಾ ಸಮಿತಿ ಕರೆ ನೀಡಿದೆ.
ಈ ಸಂಬಂಧ ನಡೆದ ಕಾರ್ಯಕ್ರಮವನ್ನು ಕಾಪು ಅಬ್ದುರ‌್ರಝಾಕ್ ಕಾಸಿಮಿ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ಹುಸೇನ್ ಕೋಟೆ ಪಡುಕೆರೆ ಅಧ್ಯಕ್ಷತೆ ವಹಿಸಿದ್ದರು. ನೇಜಾರ್ ಉಸ್ಮಾನ್ ಮದನಿ ದುವಾ ನೆರವೇರಿಸಿದರು.
ರಾಜ್ಯ ಸಮಿತಿ ಕೋಶಾಧಿಕಾರಿ ಹಾಜಿ ಮುಹಮ್ಮದ್ ಮನ್ಸೂರ್ ವಿಷಯ ಮಂಡಿಸಿದರು. ಕಲ್ಕಟ್ಟ ಅಬ್ದುರ‌್ರಹ್ಮಾನ್ ಫುರ್ಖಾನೀ ನಿರ್ವಹಣಾ ಕಾರ್ಯಕ್ರಮ ಬಗ್ಗೆ ವಿವರಿಸಿದರು. ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಫುರ್ಖಾನೀ ಹಾಗು ರಹೀಂ ಸಭಾ ಸಂಭಾಷಣೆಯಲ್ಲಿ ಭಾಗವಹಿಸಿದರು. ಮಜೀದ್ ಹನೀಫೀ ಮಾತನಾಡಿದರು.
ಕಾರ್ಯದರ್ಶಿ ಎಂ.ಕೆ.ಅಬ್ಬುರ‌್ರಶೀದ್ ಸಖಾಫಿ ಸ್ವಾಗತಿಸಿದರು. ಗುಡ್‌ವಿಲ್ ಮೊಯ್ದೀನ್ ಹಾಜಿ, ಸೂಪರ್‌ಸ್ಟಾರ್ ಅಬ್ದುಲ್ಲ, ಬಾವ ಹಾಜಿ ಮೂಳೂರು, ಇಸ್ಮಾಯಿಲ್ ಕೋಡಿ ಹೆಜಮಾಡಿ, ಯೂಸುಫ್ ಶಾಂತಿ ಪ್ರಿಯ, ಸಿದ್ದೀಕ್ ಸಖಾಫಿ ಕಣ್ಣಂಗಾರ್, ಇಬ್ರಾಹಿಂ ಹಾಜಿ ಉಚ್ಚಿಲ ಉಪಸ್ಥಿತರಿದ್ದರು.




