ಉಡುಪಿ: ಹಾಶಿಮಿ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಉಡುಪಿ: ಹಾಶಿಮಿ ಮಸೀದಿ, ನಾಯರ್‌ಕೆರೆ - ಬ್ರಹ್ಮಗಿರಿಯ ಮೌಲಾನಾ ಒಬೈದುರ್ ರಹ್ಮಾನ್ ನದ್ವಿ ಅವರು ಇಂದು ಮಳೆಗಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಈ ವರ್ಷದ ಮುಂಗಾರು ಮಳೆ ಕಡಿಮೆಯಾಗಿರುವುದರಿಂದ ರೈತರು, ಕೃಷಿ ಉತ್ಪನ್ನಗಳು ಹಾಗೂ ಕುಡಿಯುವ ನೀರಿನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಈ ವಿಶೇಷ ಪ್ರಾರ್ಥನೆಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಮಸೀದಿಯ ಅಧ್ಯಕ್ಷರಾದ ಮೊಹಮ್ಮದ್ ಝಕ್ರಿಯ ಅಸ್ಸಾದಿ ಹಾಗೂ ಕಾರ್ಯದರ್ಶಿ ಎಂ. ಇಕ್ಬಾಲ್ ಮನ್ನಾ ಅವರು ಉಪಸ್ಥಿತರಿದ್ದರು.
Next Story




