ಕರಾವಳಿ ರಂಗಾಯಣ: ತಂತ್ರಜ್ಞರು, ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ

ಉಡುಪಿ, ಜೂ.22: ಕಾರ್ಕಳ ಕರಾವಳಿ ರಂಗಾಯಣವು ತಾನು ಸಿದ್ದ ಪಡಿಸುವ ನಾಟಕಗಳು ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 3 ಮಂದಿ ತಂತ್ರಜ್ಞರು (ಸಂಗೀತ/ಧ್ವನಿ ಸಂಯೋಜಕರು-1, ಬೆಳಕಿನ ವಿನ್ಯಾಸ-1, ರಂಗಸಜ್ಜಿಕೆ-ಪರಿಕರ-1) ಹಾಗೂ 12 ಮಂದಿ ಕಲಾವಿದರ ಆಯ್ಕೆಗಾಗಿ, ರಂಗಭೂಮಿಯಲ್ಲಿ ಅನುಭವವಿರುವ ಆಸಕ್ತ ಕಲಾವಿದರು ಮತ್ತು ತಂತ್ರಜ್ಞರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಷ್ಟ್ರೀಯ ನಾಟಕ ಶಾಲೆಯ ಪದವಿ, ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದ ರಂಗಶಿಕ್ಷಣ ಪದವಿ, ಡಿಪ್ಲೋಮಾ, ರಾಜ್ಯ ಸರಕಾರ ಅಂಗೀಕೃತ ವಿಶ್ವವಿದ್ಯಾಲಯದಿಂದ ನಾಟಕ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಹಾಗೂ ಆಯಾ ತಾಂತ್ರಿಕ ವಿಷಯಗಳಲ್ಲಿ (ಸಂಗೀತ, ಧ್ವನಿ-ಬೆಳಕು, ರಂಗಸಜ್ಜಿಕೆ-ಪರಿಕರ) ಪರಿಣತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ರಂಗಭೂಮಿ ಅನುಭವ ಅಪೇಕ್ಷಣೀಯ.
ಆಸಕ್ತ ಕಲಾವಿದರು ಹಾಗೂ ತಂತ್ರಜ್ಞರನ್ನು ನಿಯಮಾನುಸಾರ ತಾತ್ಕಾಲಿಕ ವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು. ಕಲಾವಿದರಿಗೆ ವಯಸ್ಸಿನ ಮಿತಿ 18 ರಿಂದ 32 ವರ್ಷ. ತಂತ್ರಜ್ಞರಿಗೆ ವಯಸ್ಸಿನ ಮಿತಿ ಇರುವುದಿಲ್ಲ.
ಆಯ್ಕೆಯಾದ ಕಲಾವಿದರು ರಂಗಾಯಣದ ನಿಯಮ ಮತ್ತು ಷರತ್ತು ಗಳಿಗೆ ಬದ್ಧರಾಗಿರಬೇಕು. ತಂತ್ರಜ್ಞರಿಗೆ ರೂ. 25,000, ಮೊದಲ ವಷರ್ದಲ್ಲಿ ಕಲಾವಿದರಿಗೆ ರೂ.18,000, ಎರಡನೇ ವರ್ಷದ ಕಲಾವಿದರಿಗೆ (ರಾಷ್ಟ್ರೀಯ ನಾಟಕ ಶಾಲೆ, ಇತರೆ ರಂಗಾಯಣ, ರಂಗಶಿಕ್ಷಣ ಕೇಂದ್ರದಲ್ಲಿ ತಿರುಗಾಟ ಅನುಭವ ಇರುವ ಕಲಾವಿದರು) ಮಾಸಿಕ ಗೌರವ ಸಂಭಾವನೆ ರೂ.20,000 ನೀಡಲಾಗುವುದು.
ಆಸಕ್ತ ಕಲಾವಿದರು ಬಿಳಿ ಹಾಳೆಯ ಮೇಲೆ ಸ್ವವಿವರದೊಂದಿಗೆ ಜುಲೈ 15ರ ಸಂಜೆ 5 ಗಂಟೆಯೊಳಗೆ ವಿಶೇಷ ಕರ್ತವ್ಯಾಧಿಕಾರಿ, ಕರಾವಳಿ ರಂಗಾಯಣ ಕಛೇರಿ, ಕೋಟಿ ಚೆನ್ನಯ ಥೀಂ ಪಾರ್ಕ್, ಕಸಬಾ ಗ್ರಾಮ, ಕಾರ್ಕಳ ತಾಲೂಕು - 574104, ಉಡುಪಿ ಜಿಲ್ಲೆ- ಈ ವಿಳಾಸಕ್ಕೆ ಅಂಚೆ ಅಥವಾ ಇ-ಮೇಲ್ ವಿಳಾಸದಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9980765355, 9900987866, 7676501443, 8123471121, 08258-200845ಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಸಂದರ್ಶನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಸಂದರ್ಶನ ಸಮಯದಲ್ಲಿ ಜನ್ಮ ದಿನಾಂಕ ದೃಢೀಕರಣ ಪತ್ರ, ಎನ್.ಎಸ್.ಡಿ/ಡಿಪ್ಲೊಮೋ ಪ್ರಮಾಣ ಪತ್ರ, ರಂಗಶಿಕ್ಷಣ ಕೇಂದ್ರದ ಅನುಭವ ಪ್ರಮಾಣ ಪತ್ರ, ರಂಗಭೂಮಿ ಅನುಭವ ಕುರಿತು ಸ್ವವಿವರ ಪತ್ರ (ಅಗತ್ಯ ದಾಖಲೆಗಳೊಂದಿಗೆ) ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಹಾಜರಾಗುವಂತೆ ಕಾರ್ಕಳ ಕರಾವಳಿ ರಂಗಾಯಣ ವಿಶೇಷ ಕರ್ತವ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.






