ಕುಂದಾಪುರ: ಹೊಸಾಡು ಗ್ರಾಪಂ ಚುನಾವಣಾ ಕ್ಷೇತ್ರದ ವ್ಯಾಪ್ತಿ ಪ್ರಕಟ

ಉಡುಪಿ, ಜೂ.23: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ, 1993ರ 5ನೇ ಪ್ರಕರಣದ ಉಪ ಪ್ರಕರಣ (5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ಭಜಿಸಿ, ಕ್ಷೇತ್ರದ ಸಂಖ್ಯೆ, ಪ್ರತಿ ಕ್ಷೇತ್ರದ ಹೆಸರು, ಕ್ಷೇತ್ರ ವ್ಯಾಪ್ತಿ ಹಾಗೂ ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಗಳ ವಿವರವನ್ನು ಪ್ರಕಟಿಸಲಾಗಿದೆ.
ಹೊಸಾಡು-1: ಕಂಚಗೋಡು, ಜನತಾ ಕಾಲೋನಿ-1, ಜನತಾ ಕಾಲೋನಿ -11, ಖಾರ್ವಿಕೇರಿ. ಹೊಸಾಡು ಗ್ರಾಮದ ವಾರ್ಡ್ 1ರಲ್ಲಿ ಮನೆ ನಂಬ್ರ 1ರಿಂದ 201ರ ತನಕ. ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ-3.
ಹೊಸಾಡು-2: ಗಾಣದಮಕ್ಕಿ, ಕೇರಿಕೊಡ್ಲು, ಕಮ್ಮಾರಕೊಡ್ಲು, ಕಾಳುಮನೆ, ಕೋಟೆಮಕ್ಕಿ, ಮುಳ್ಳಿಕಟ್ಟಿ, ಕಡೇರಮನೆ, ಕೊಪ್ಪರಿ. ಹೊಸಾಡು ಗ್ರಾಮದ ವಾರ್ಡ್ 1ರಲ್ಲಿ ಮನೆ ನಂಬ್ರ 202 ಮತ್ತು ಮೇಲ್ಪಟ್ಟು. ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ-2.
ಹೊಸಾಡು-3: ಅರಾಟೆ, ಒಳನಾಡು, ಸೊಬ್ರಹಿಟ್ಟು. ಹೊಸಾಡು ಗ್ರಾಮದ ವಾರ್ಡ್ 2.ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ-3.
ಸೇನಾಪುರ-1: ಗುಡ್ಡೆಯಂಗಡಿ, ಬೆಳ್ಳಾಡಿ, ರೈಲ್ವೆ ಸ್ಟೇಶನ್, ರಾಮನಗರ, ಶಿವಾನಗರ ಸೇನಾಪುರ ಗ್ರಾಮದ ವಾರ್ಡ್ 1. ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ-4.
ಸೇನಾಪುರ-2: ಗುಡ್ಡಮ್ಮಾಡಿ, ಪರಂಕಳಿ, ಸಾಲಾಡಿ, ಒಳಬೈಲು. ಸೇನಾಪುರ ಗ್ರಾಮದ ವಾರ್ಡ್ 2. ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ- 3.
ಈ ಕರಡು ಅಧಿಸೂಚನೆಯಿಂದ ಬಾಧಿತರಾಗಬಹುದಾದ ಸಾರ್ವಜನಿಕರ ತಿಳುವಳಿಕೆಗಾಗಿ ಈ ಉಪ ಪ್ರಕರಣ ಹಾಗೂ ಸರ್ಕಾರದ ತಿದ್ದುಪಡಿ ಸುತ್ತೋಲೆ 2026ರ ಜೂನ್ 10 ರ ನಿರ್ದೇಶಿಸಿದಂತೆ ಈ ಮೂಲಕ ಪ್ರಕಟಿಸಲಾಗಿದ್ದು, ಸದರಿ ಕರಡು ಅಧಿಸೂಚನೆಗೆ ಆಕ್ಷೇಪಣೆಗಳಿದ್ದಲ್ಲಿ ಜೂನ್ 29ರ ಸಂಜೆ 5 ಗಂಟೆಯೊಳಗೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಅಥವಾ ಕುಂದಾಪುರದ ತಹಶೀಲ್ದಾರರ ಕಚೇರಿಯಲ್ಲಿ ಸಲ್ಲಿಸಬಹುದು.
ಜೂನ್ 29ರ ಬಳಿಕ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.






