ಬಸ್ರೂರು ಎನ್‌ಎನ್‌ಓಯಿಂದ ಕುರಾನ್ ವಿತರಣೆ

ಕುಂದಾಪುರ, ಜೂ.26: ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ವತಿಯಿಂದ ಬಸ್ರೂರು ಪಾನಕದಕಟ್ಟೆ ನೂರಾನಿ ಜಾಮಿಯಾ ಮಸೀದಿಯ ಮದ್ರಸ ವಿದ್ಯಾರ್ಥಿಗಳಿಗೆ ಪವಿತ್ರ ಕುರಾನ್ ಹಸ್ತಾಂತರಿಸಲಾಯಿತು.
ಕುರಾನ್ ಪ್ರತಿಗಳನ್ನು ಖತೀಬ್ ಮೌಲಾನಾ ಸುಹೇಲ್ ಹಾಗೂ ಜಮಾಅತ್ ಸಮಿತಿಯ ಕಾರ್ಯದರ್ಶಿ ನವಾಝ್ ಸಾಹೇಬ್ ಬಸ್ರೂರು ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಅಧ್ಯಕ್ಷ ಅನ್ಸಾರ್ ಹೊಸಂಗಡಿ, ಎನ್‌ಎನ್‌ಓ ಸೆಂಟ್ರಲ್ ಸಮಿತಿಯ ಟ್ರಸ್ಟಿ ಹಾಗೂ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ, ಸ್ಥಳೀಯರಾದ ಎನ್‌ಎಂ.ಘನಿ ಸಾಹೇಬ್ ಉಪಸ್ಥಿತರಿದ್ದರು.
ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಅರ್ಫಾತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story




