ಗಂಗೊಳ್ಳಿ ತೌಹೀದ್ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ

ಕುಂದಾಪುರ, ಜೂ.27: ಗಂಗೊಳ್ಳಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಶಾಲಾ ವಿದ್ಯಾರ್ಥಿಗಳ ಸಂಸತ್ತಿನ ಚುನಾವಣೆಯನ್ನು ಮೊಬೈಲ್‌ನಲ್ಲಿ ಇವಿಎಂ ಮೂಲಕ ನಡೆಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಇಬ್ರಾಹಿಂ ಚೌಗಲೆ ಉದ್ಘಾಟಿಸಿ ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ಮುಖ್ಯಸ್ಥ ಅಮ್ಜದ್ ಅಲಿ ಇಬ್ರಾಹಿಂ ಶೇಖ್ ಶಾಲಾ ಸಂಸತ್ತಿನ ಮಹತ್ವ ಮತ್ತು ನಾಯಕತ್ವದ ಗುಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದರ ಮೂಲಕ ಶುಭ ಹಾರೈಸಿದರು.
ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯಿನಿ ಝುಲೇಖ ಮುಲ್ಲಾ ಮತ್ತು ಮ್ಯಾನೇಜರ್ ತಾಹಿರ್ ಹಸನ್ ಉಪಸ್ಥಿತರಿ ದ್ದರು. ಅಭ್ಯರ್ಥಿಗಳು ತಮ್ಮ ಚಿಹ್ನೆಯನ್ನು ತೋರಿಸುವುದರ ಮೂಲಕ ಮತಯಾಚಿಸಿದರು. ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸಿದರು. 10ನೇ ತರಗತಿಯ ಮೌಲಾನ ಅತಿಯಾಬ್ ಮತ್ತು ಐಝಾ ಶಾಲಾ ಸಂಸತ್ತಿನ ಎಸ್‌ಪಿಎಲ್ ಆಗಿ, 9ನೇ ತರಗತಿಯ ಮೊಹಮ್ಮದ್ ಅಲಿಕ್ ಮತ್ತು ರುಯೇಫಾ ಎಎಸ್‌ಪಿಎಲ್ ಆಗಿ ಆಯ್ಕೆ ಗೊಂಡರು. ಶಿಕ್ಷಕಿ ಜಯಂತಿ ಸ್ವಾಗತಿಸಿದರು. ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.




